ಮುಂಡಗೋಡ : ಕುದಿಸಿ ಇಟ್ಟ ಗಂಜಿಯಲ್ಲಿ ಬಿದ್ದು ಎರಡು ವರ್ಷದ ಮಗು ಬಿದ್ದು ಸಾವನ್ನಪ್ಪಿದ(Child Death) ಘಟನೆ ತಾಲೂಕಿನ ಚಳಗೇರಿಯಲ್ಲಿ ಸಂಭವಿಸಿದೆ.
ಮುಂಡಗೋಡ : ನಾಯಿಗಳಿಗೆ ತಿನ್ನಲು ಕುದಿಸಿಡಲಾಗಿದ್ದ ಗಂಜಿ ಬೊಗಣಿಯಲ್ಲಿ ಬಿದ್ದ ಮಗು ಸಾವು ತಂದುಕೊಂಡ ಘಟನೆ ತಾಲೂಕಿನ ಚಳಗೇರಿಯಲ್ಲಿ ಸಂಭವಿಸಿದೆ. ಡಿಸೆಂಬರ್ 26ರಂದು ಈ ಘಟನೆ ನಡೆದಿದೆ. ಕೃಷ್ಣಾ ಬೀರು ಲಾಂಬೋರ(2)ಮೃತ ಮಗು. ಕುದಿಸಿಡಲಾಗಿದ್ದ ಗಂಜಿ ಬೊಗಣಿಯಲ್ಲಿ ಮಗು ಬಿದ್ದು ಗಾಯಗೊಂಡಿತ್ತು. ಗಂಭೀರ ಗಾಯಗೊಂಡ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.