ಇದೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ಪ್ರಕಟಿಸಿದ ಹೈಕೋರ್ಟ್ ವಿಭಾಗೀಯ ಪೀಠ

ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸಿ ಶೀಘ್ರ ಆದೇಶ ಜಾರಿ ಮಾಡಬೇಕೆಂಬ ಕೂಗು ಶುರುವಾಯ್ತು. ಇದರ ಮಧ್ಯ ಇದೀಗ ಕರ್ನಾಟಕ ಹೈಕೋರ್ಟ್​ ವಿಭಾಗೀಯ ಪೀಠ ಇದೇ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲೇ ಪ್ರಕರಣವೊಂದರ ತೀರ್ಪು ಪ್ರಕಟಿಸಿದೆ. ಸಾಂವಿಧಾನಿಕ ಸಂಸ್ಥೆಗಳು ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೈರ್ತಿ ಸಿ.ಎಂ.ಜೋಶಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಡಿಸೆಂಬರ್ 12): ಮೊದಲೇ ಕಾನೂನು ಕೋರ್ಟ್‌ ತೀರ್ಪುಗಳು ಜನಸಾಮಾನ್ಯರಿಗೆ ಅರ್ಧವಾಗುವುದು ಕಷ್ಟ. ಅದರಲ್ಲೂ ಸಂಪೂರ್ಣ ಆಂಗ್ಲ ಭಾಷೆಯಲ್ಲಿದ್ದ ಕಾರಣ ಪ್ರಾದೇಶಿಕ ಭಾಷಿಕರಿಗೆ ಓದಿಕೊಳ್ಳುವುದು ಮತ್ತಷ್ಟು ಸಮಸ್ಯೆ. ಇದರ ಮಧ್ಯ ಕರ್ನಾಟಕ ಹೈಕೋರ್ಟ್​​ ಇದೇ ಮೊದಲ ಬಾರಿಗೆ ಪ್ರಕಣವೊಂದರ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿದೆ. ಹೌದು…ನಿನ್ನೆ (ಡಿಸೆಂಬರ್ 11) ಭಾರತ ಭಾಷಾ ದಿವಸದ ಪ್ರಯುಕ್ತ ಸಾಂಕೇತಿಕವಾಗಿ ಇಂದು (ಡಿಸೆಂಬರ್ 12) ನ್ಯಾ. ಕೃಷ್ಣ ಎಸ್.ದೀಕ್ಷಿತ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ಪೀಠ, ನಂಜಾವಧೂತ ಸ್ವಾಮಿ ವಿರುದ್ಧ ಎಸ್.ಲಿಂಗಣ್ಣ ಪ್ರಕರಣದಲ್ಲಿ ಕನ್ನಡದಲ್ಲೇ ತೀರ್ಪು ನೀಡಿದೆ.

ಇಂಗ್ಲೆಂಡ್​ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು. 1730ರಿಂದ ಅವರ ಸ್ವಭಾಷೆ ಇಂಗ್ಲಿಸ್​ನಲ್ಲೇ ಕಲಾಪ ಆರಂಭಿಸಿದ್ದರು. ಆದ್ರೆ, ಜನಸಾಮಾನ್ಯರಿಗೆ ಕೋರ್ಟ್​ಗಳ ತೀರ್ಪು ಏನಿದೆ ಎಂದು ತಿಳಿಯಬೇಕೆಂದು ಈ ಉಪಕ್ರಮ. ಕನ್ನಡ ಅವಸಾನವಾಗಬಾರದೆಂದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳು ಕನ್ನಡದಲ್ಲೇ ವ್ಯವಹರಿಸು