ಬೆಂಗಳೂರು ನವೆಂಬರ್ 09 : ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬಾಲಾಜಿ ವಿದ್ಯಾಪೀಠ ಪಾಂಡಿಚರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ” ಕಾರ್ಯಗಾರ ಯಶಸ್ವಿಯಾಗಿ ಜರುಗಿತು. ಶ್ರೀಮತಿ ಡಾ.ವೈಷ್ಣವಿ ಕೆ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್. ಇ. ಸುಧೀಂದ್ರ ಕಾರ್ಯಕ್ರಮದ ಗೌರವದ ಅತಿಥಿಗಳಾಗಿ ಉಪಸ್ಥಿತರಿದ್ದರು. ಇಬ್ಬರು ಅತಿಥಿಗಳು ವಿಶ್ವವಿದ್ಯಾಲಯದ ಇಂತಹ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮತ್ತು ಯೋಗ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಶ್ಲಾಘಿಸಿದರು. ಇದರಿಂದಾಗಿ ಮಾನಸಿಕ ಆರೋಗ್ಯದ ಬೆಳವಣಿಗೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬಹುದು ಎಂಬುದನ್ನು ಅದ್ಭುತವಾಗಿ ವಿವರಿಸಿದ್ರು.
ಕೆಎಸ್ ಯು ಉಪಕುಲಪತಿ ಪ್ರೊ.ಎಸ್.ಅಹಲ್ಯಾ ಅಧ್ಯಕ್ಷತೆ ವಹಿಸಿದ್ದರು. ಡಾ.ಗಿರೀಶ್ಚಂದ್ರ ಡೀನ್, ಡಾ ಪಾಲಯ್ಯ ಡೀನ್, ಡಾ.ಶಿವಾನಿ ಡೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಾಜಿ ವಿದ್ಯಾಪೀಠದ ಸಹಾಯಕ ಪ್ರೊ.ಡಿ.ಆರ್.ಬಾಲಾಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಲಾಜಿ ವಿದ್ಯಾಪೀಠ ಪ್ರಾಯೋಜಿಸಿತ್ತು. ಸುಮಾರು 280 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡ್ರು…