ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಡೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಮುಂಡಗೋಡ : 9ನೇ ತರಗತಿ ಓದುತ್ತಿದ್ದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬಾತ ನಿನ್ನೆ ಮಳೆಯಿಂದಾಗಿ ತುಂಬಿದ ಕೆರೆ ನೋಡಲು ಹೋಗಿದ್ದ. ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ಹೀಗಾಗಿ ಪಾಲಕರು ಬಾಲಕ ನಾಪತ್ತೆ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ಪೊಲೀಸರು ಪತ್ತೆಗಾಗಿ ಶೋಧ ನಡೆಸುವ ವೇಳೆ ಬಾಲಕ ಬಟ್ಟೆ ಸಾಲಗಾವಿ ಕೆರೆ ಬಳಿ ಪತ್ತೆಯಾಗಿತ್ತು ಹೀಗಾಗಿ ಬಾಲಕ ಕೆರೆಯಲ್ಲಿಯೇ ಮುಳುಗಡೆ ಆಗಿರಬಹುದು ಎಂದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ ವೇಳೆ ಇಂದು ಬಾಲಕನ ಶವ ಪತ್ತೆಯಾಗಿದೆ. ಶವವನ್ನು ಕೆರೆಯಿಂದ ಮೇಲಕ್ಕೆತ್ತಲಾಗಿದ್ದು, ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.