ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

ಬೆಂಗಳೂರು, ಅ.20: ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್​ನ ಕಮಾಂಡ್‌ ಸೆಂಟರ್‌ಗೆ ಬಾಂಬ್‌ ಬೆದರಿಕೆ ಸಂದೇಶ ರವಾನೆ ಮಾಡಲಾಗಿದೆ. 6 ವಿಮಾನಗಳಲ್ಲಿ ಇಬ್ಬರು ಒಟ್ಟು 12 ಬಾಂಬರ್‌ಗಳಿರುವುದಾಗಿ ಟ್ವೀಟ್‌ ಮಾಡಲಾಗಿದೆ.

ಸದ್ಯ ಹುಸಿ ಬಾಂಬ್‌ ಬೆದರಿಕೆ ಮೆಸೇಜ್ ಮಾಡಿದವರ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಡಿಗೋ ಏರ್‌ಲೈನ್ಸ್‌ನ IX 233, IX 375, IX 481, IX 383, IX 549, IX 399 ವಿಮಾನಗಳಲ್ಲಿ ಬಾಂಬರ್‌ಗಳಿರುವುದಾಗಿ ಟ್ವೀಟ್‌ ರವಾನಿಸಲಾಗಿದೆ. ಮಂಗಳೂರು-ದುಬೈ, ತಿರುವನಂತಪುರಂ-ಮಸ್ಕಟ್ ಸೇರಿದಂತೆ ದೇಶದ ವಿವಿಧ ಏರ್‌ಪೋರ್ಟ್‌ಗಳಿಂದ ತೆರಳುವ ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿದೆ. ಬೆದರಿಕೆ ಮೆಸೇಜ್ ಹಿನ್ನೆಲೆ ಏರ್‌ಪೋರ್ಟ್‌ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ.