ಹಾಲಿನ ದರ ಏರಿಕೆಗೆ ಕೆಎಂಎಫ್ ತಾತ್ಕಾಲಿಕ ಬ್ರೇಕ್

ಬೆಂಗಳೂರು: ಹಾಲಿನ ದರ ಏರಿಕೆ ಭೀತಿಯಲ್ಲಿದ್ದ ಜನತೆಗೆ ಸದ್ಯಕ್ಕೆ ಆ ಚಿಂತೆ ದೂರವಾಗುವ ಸಾಧ್ಯತೆ ಇದೆ. ಸರ್ಕಾರ ತಾತ್ಕಾಲಿಕ ರಿಲೀಫ್ ನೀಡುವ ಸಾಧ್ಯತೆ ಇದ್ದು, ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ.

ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ ಗ್ರಾಹಕರಲ್ಲಿ ಮನೆ ಮಾಡಿತ್ತು. ಅಲ್ಲದೇ ಈಗಾಗಲೇ . ಲೀಟರ್ ಗೆ 48 ರೂ ತಲುಪಿದ್ದು, ಮತ್ತೆ ಹೆಚ್ಚಾದರೆ ಹೇಗೆ ಅನ್ನೋ ಆತಂಕ ಕೂಡ ಗ್ರಾಹಕರಲ್ಲಿ ಮೂಡಿತ್ತು. ಸರ್ಕಾರದ ಈ ನಿರ್ಧಾರ ಸದ್ಯಕ್ಕಂತು ಗುಡ್ ನ್ಯೂಸ್ ಅಂದ್ರೆ ತಪ್ಪಾಗಲ್ಲ.

ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು. ಆ ಬೆನ್ನಲ್ಲೆ ಕೆಎಂಎಫ್ ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಂತಿದ್ದು, ಈ ವರ್ಷ ಬಹುತೇಕ ಈ ಬಗ್ಗೆ ಯೋಚನೆ ಬೇಡ ಅನ್ನೋ ತೀರ್ಮಾನ ಮಾಡಿದೆಯಂತೆ.

ಕೆಎಂಎಫ್ 5 ರೂ. ಏರಿಕೆಗೆ ಪ್ರಸ್ತಾವನೆ ಸಿದ್ಧತೆ ಮಾಡಿತ್ತು. ಇದು ಫೈನಲ್ ಆಗಿದ್ರೆ ಸರ್ಕಾರ 1 ರಿಂದ 2 ರೂ. ದರ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ ಸರ್ಕಾರ ಪರಿಷ್ಕರಣೆ ಕೈ ಬಿಡುವ ಸಾಧ್ಯತೆ ಹಿನ್ನೆಲೆ ಗ್ರಾಹಕರು ಸದ್ಯಕ್ಕಂತು ಕೊಂಚ ನಿರಾಳ ಆಗಬಹುದು.