ಭಟ್ಕಳ: ಹಿಂದೂ ಜಾಗರಣ ವೇದಿಕೆ ವತಿಯಿಂದ ಆ. 14 ರಂದು ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಆಸರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಸಂಜೆ 5.30 ಕ್ಕೆ ಆರಂಭವಾಗಲಿದೆ. ಮುಖ್ಯ ಅಥಿತಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಅರುಣ್ ನಾಯ್ಕ್, ಉದ್ಘಾಟಕರಾಗಿ ಹಿಂದೂ ಮುಖಂಡರೂ ನಾಮಧಾರಿ ಸಂಘದ ಅಧ್ಯಕ್ಷರೂ ಆದ ಕೃಷ್ಣಾ ನಾಯ್ಕ್ ಹಾಗೂ ವಕ್ತಾರರಾಗಿ ಗಣೇಶ್ ಜಿ ಕಣಗಾರ್ ಆಗಮಿಸಲಿದ್ದಾರೆ.