ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ನಗರದ ಬಾಣಸವಾಡಿಯ ಓಎಂಬಿಆರ್ ಲೇಔಟ್‌ನಲ್ಲಿ ಜರುಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳು ಜನರಿಗೆ ಕಂಟಕವಾಗಿ ಪರಿಣಮಿಸಿದ್ದು, ಬೀದಿ ನಾಯಿ ದಾಳಿಗೆ ಮಹಿಳೆ ಬಲಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದ್ದು, ನಾಯಿ ದಾಳಿಯಿಂದ ಯುವತಿಯ ಕಾಲಿಗೆ ಗಾಯಗೊಳಿಸಿರುವ ದೃಶ್ಯ, ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೀದಿ ನಾಯಿಗಳ ಹಾವಳಿಯಿಂದ ನಗರದ ಜನತೆ ರೋಸಿ ಹೋಗಿದ್ದು, ದಂಡು ಕಟ್ಟಿ ದಾಳಿ ಮಾಡುವ ಶ್ವಾನಗಳ ಉಪಟಳ ಮಿತಿಮೀರಿದೆ. ಸುಮ್ಮನೆ ಹೋಗುತ್ತಿದ್ದವರ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿವೆ. ನಿನ್ನೆ ಬಾಣಸವಾಡಿಯ ಓಎಂಬಿಆರ್ ಲೇಔಟ್‌ನಲ್ಲಿ ಬೀದಿನಾಯಿ ಅಟ್ಯಾಕ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.