ಭೀಕರ ರಸ್ತೆ ಅಪಘಾತ: ಮಹಿಳೆ ಸಾವು, ಐವರು ಗಂಭೀರ

ಹುಬ್ಬಳ್ಳಿ: ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿಯ ತಡಸ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಟಾಟಾ ಏಸ್ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಟಾಟಾ ಏಸ್ ಮಹಿಳೆಯರು ಗಾರ್ಮೆಟ್ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ವೇಗವಾಗಿ ಬಂದು ಲಾರಿ ಟಾಟಾ ಏಸ್‌ಗೆ ಡಿಕ್ಕಿಯಾಗಿದೆ.

ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.