ಪೊಲೀಸ್ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಣೆ

ಭಟ್ಕಳ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ ನೇತೃತ್ವದಲ್ಲಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ  ಶಿವಾನಿ ಶಾಂತಾರಾಮ ರಕ್ಷಾಬಂಧನದ ಮಹತ್ವ ಹಾಗೂ ದಿನದ 24 ಗಂಟೆಗೆ
ನಮ್ಮನ್ನು ರಕ್ಷಿಸುವ  ಆರಕ್ಷಕ ಸಹೋದರರ ಜೊತೆಗೆ ರಕ್ಷಾಬಂಧನ ಆಚರಿಸಿಕೊಂಡಿರುವುದು ತುಂಬಾ ಸಂತೋಷವಾಗಿದ್ದು. ಇವರೊಂದಿಗೆ ಈ ಕಾರ್ಯಕ್ರಮ ಆಚರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಆರಕ್ಷಕ ಸಿಬ್ಬಂದಿಗಳಿಗೆ  ಧನ್ಯವಾದ  ಅರ್ಪಿಸಿದರು.

ಈ ಸಂದರ್ಭದಲ್ಲಿ  ಪಿಎಸ್ಐ  ಸುಮಾ ಆಚಾರ್ಯ ಮತ್ತು ಎಚ್ ಪಿ ಕುಡಗುಂಟಿ, ಪೊಲೀಸ್ ಸಿಬ್ಬಂದಿಗಳು, ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಗೊಂಡ, ಸುನೀತ ಡಿ ಹೇರೂರ್ಕರ್, ಶ್ರೇಯಾ ಮಹಾಲೆ ಮತ್ತು ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.