ಆ್ಯಂಬುಲೆನ್ಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸ್ಥಳದಲ್ಲೇ ಸಾವು

ಶಿವಮೊಗ್ಗ, ಜೂನ್.29: ಆ್ಯಂಬುಲೆನ್ಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ‌ ತಡರಾತ್ರಿ ಸಂಭವಿಸಿದೆ. ಪ್ರಸನ್ನ(25), ಕಾರ್ತಿಕ್ (27), ಅಜಯ್(25) ಮೃತ ದುರ್ದೈವಿಗಳು.

ಶಿವಮೊಗ್ಗದಿಂದ ಹಾವೇರಿ ಕಡೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್​ಗೆ ಶಿಕಾರಿಪುರದ ಕಡೆಯಿಂದ ಸ್ವಗ್ರಾಮಕ್ಕೆ ಹೊರಟಿದ್ದ ಬೈಕ್​ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹೊಸ ಜೋಗದ ಮೂವರು ಸವಾರರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.