ಬೆಂಗಳೂರು, ಜೂನ್ 24: ಬಾಡಿಗೆ ಆಸೆಗೆ ಬಿದ್ಧ ಮನೆ ಮಾಲೀಕರಿಗೆ ಬ್ರೋಕರ್ಕಂ. ಪನಿ ಹೆಸರಲ್ಲಿ ಕೋಟಿ ಕೋಟಿ ರೂ. ಪಂಗನಾಮ ಹಾಕಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಯೂ ಹೋಮ್ಸ್ ಎಂಬ ಕಂಪನಿ ಹೆಸರಲ್ಲಿ ಮನೆಗಳು, ಫ್ಲಾಟ್ಗಳನ್ನು ಡೀಲ್ ಮಾಡಲಾಗಿದೆ. ಬಾಡಿಗೆಗೆ ಕೊಡಿಸುತ್ತೇನೆ ಎಂದು ಮಧ್ಯಸ್ಥಿಕೆ ವಹಿಸಿದ್ದ ಆಸಾಮಿ ಅಹಮದ್ ಆಲಿ ಬೇಗ್, ಮಾಲೀಕರಿಂದ ಮನೆ ಪಡೆದು ನನ್ನದೇ ಅಂತ ನಂಬಿಸಿ ಲಕ್ಷ ಲಕ್ಷ ರೂ. ಹಣ ಪಡೆದು ಲೀಸ್ಗೆ ಕೊಟ್ಟಿದ್ದಾರೆ.
ಇದೀಗ ಬರೋಬ್ಬರಿ 300 ರಿಂದ 400 ಜನರಿಗೆ ಇದೇ ರೀತಿ ಮೋಸ ಮಾಡಿ ಎಲ್ಲರ ಹಣ ಲಪಲಾಟಿಯಿಸಿ ಪರಾರಿ ಆಗಿದ್ದಾರೆ. ಹೆಣ್ಣೂರು ಸುತ್ತಮುತ್ತ ನೂರಾರು ಜನರಿಗೆ ವಂಚನೆ ಆಗಿದೆ. ಸದ್ಯ ವಂಚನೆಗೊಳಗಾದವರಿಂದ ನ್ಯಾಯಕ್ಕಾಗಿ ಎಂ.ಜಿ.ರಸ್ತೆಯ ಗಾಂಧಿ ಉದ್ಯಾನವನದ ಬಳಿ ಮೌನ ಪ್ರತಿಭಟನೆ ಮಾಡಲಾಗಿದೆ.
ನಮಗೆ ನಮ್ಮ ಮನೆಗಳು ವಾಪಸ್ ಬೇಕು ಎನ್ನುತ್ತಿರುವ ಮಾಲೀಕರು ಒಂದು ಕಡೆಯಾದರೆ, ನಮ್ಮ ಹಣ ವಾಪಸ್ ಬೇಕು ಅಂತಿರುವ ಬಾಡಿಗೆದಾರರು. ದೂರು ಕೊಡಲು ಹೋದರೆ ಪೊಲೀಸರು ಎಫ್ಐಆರ್ ದಾಖಲಿಸುತ್ತಿಲ್ಲ. ಸಿಸಿಬಿಗೆ ವರ್ಗಾಯಿಸಿದ್ದೇವೆ ಅಂತಾ ಸಬೂಬು ಹೇಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕೋಟಿ ಕೋಟಿ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡು ಮಾಲೀಕರು ಕಂಗಾಲಾಗಿದ್ದಾರೆ.