ರಾಮನಗರ: ಅಶ್ವಥ್ ನಾರಾಯಣ್ ಹಾಗೂ ಕುಮಾರಸ್ವಾಮಿ ನಡುವೆ ಟ್ವೀಟ್ ವಾರ್ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪಂಚತಾರ ಹೋಟೆಲ್ ನಲ್ಲಿ ಉಳಿದು ಕೊಳ್ಳುತ್ತಾರೆ ಎಂದು ಆರೋಪ ಮಾಡುತ್ತಾರೆ. ಹಾಗಾದ್ರೆ ದೆಹಲಿಯಿಂದ ಬರುವ ಅಮಿಶ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಹಾಲ್ಟ್ ಮಾಡ್ತಾರೆ. ಅವರು ಹೋಟೆಲ್‌ಗೆ ಹೋಗಬಹುದಾ.? ಕುಮಾರಸ್ವಾಮಿ ಹೋದ್ರೆ ತಪ್ಪಾ.? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ನಾನು ಗುಡಿಸಲಲ್ಲೂ ಮಲಗಿದ್ದೇನೆ, ಪಂಚತಾರ ಹೋಟೆಲ್ ನಲ್ಲೂ ಮಲಗಿದ್ದೇನೆ. ನಾನು ಇವರಿಂದ ಕಲಿಯ ಬೇಕಾಗಿಲ್ಲ. ನನ್ನ ಬಗ್ಗೆ ಚರ್ಚೆ ಮಾಡಲು ಇರುವುದು ಅದೊಂದೇ ವಿಷಯ. ಸಿದ್ದರಾಮಯ್ಯ ಸರ್ಕಾರಿ ಬಂಗಲೆ ಬಿಟ್ಟುಕೊಡಲಿಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಇರಲಿಲ್ಲ. ನಾನು 2 ನೇ ಬಾರಿ ಸಿಎಂ ಆದಾಗ ಸರ್ಕಾರಿ ಬಂಗಲೆ, ವಾಹನ, ಪೆಟ್ರೋಲ್ ಹಣ, ಮನೆ ಬಾಡಿಗೆ ತೆಗೆದುಕೊಂಡಿಲ್ಲ. ನಾನು ಸ್ವಾಭಿಮಾನದಿಂದ ಬದುಕಿದ್ದೇನೆ. ಆದ್ರೆ ಇವರು ಅದೇ ಹೋಟೆಲ್ ನಲ್ಲೇ ಸಭೆ ನಡೆಸುತ್ತಿದ್ರು. ಇವರು ಯಾಕೆ ಅಲ್ಲಿ ಸೇರುತ್ತಾರೆ.? ಎಂದು ಬಿಜೆಪಿ ನಾಯಕರಿಗೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.