ಪ್ರವಾಸಿ ತಾಣದಲ್ಲಿ ಇದೆಂಥಾ ಅನಾಚಾರ: ಜಲಪಾತದ ಬಳಿ ಪ್ರವಾಸಿಗರ ಎಣ್ಣೆ ಪಾರ್ಟಿ!

ಚಿಕ್ಕಮಗಳೂರು, ಜೂನ್​ 22: ಸದ್ಯ ಎಲ್ಲೆಡೆ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ನಿಸರ್ಗ ಹಚ್ಚ ಹಸಿರಿನಿಂದ ಕೂಡಿದೆ. ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಇದೇ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೆಲ ಅನಾಚಾರಗಳು ನಡೆಯುತ್ತಿವೆ. ಜಲಪಾತದ ಪಕ್ಕದಲ್ಲೇ ಪ್ರವಾಸಿಗರು ಮದ್ಯ ಸೇವಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಆ ಮೂಲಕ ಪ್ರವಾಸಿಗರ ಮೆಚ್ಚಿನ ತಾಣದಲ್ಲಿ ಇದೆಂಥಾ ಸಂಸ್ಕೃತಿ ಎಂಬು ಪ್ರಶ್ನೆ ಮೂಡಿದೆ. ಕಳಸ ತಾಲೂಕಿನ ಸೂರಮನೆ ಜಲಪಾತದ ಬಳಿ ಈ ಘಟನೆ ಕಂಡುಬಂದಿದೆ. ಜಲಪಾತದ ಪಕ್ಕದಲ್ಲೇ ಕೂತು ಪ್ರವಾಸಿಗರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪ್ರವಾಸಿಗರ ವರ್ತನೆ ಕಂಡು ಫ್ಯಾಮಿಲಿ ಟೂರಿಸ್ಟ್​ಗಳಿಗೆ ಕಿರಿ-ಕಿರಿ ಉಂಟಾಗಿದೆ. ಕಳಸ-ಹೊರನಾಡ ಬಹುತೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ಸ್ಥಳಗಳಲ್ಲಿ ಒಂದು. ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತವಾಗಿದೆ. ವೀಕೆಂಡ್​ನಲ್ಲಿ ಪೊಲೀಸರನ್ನ ನಿಯೋಜನೆ ಮಾಡುವಂತೆ ಪ್ರವಾಸಿಗರ ಒತ್ತಾಯಿಸಿದ್ದಾರೆ.