ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ವಿಜಯಪುರ, ಜೂ.18: ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ದಾರುಣ ಇಬ್ಬರು ಬಾಲಕರು ಸಾವನಪ್ಪಿದ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ನಡೆದಿದೆ. ರೋಹಿತ್ ಅನಿಲ್ ಚವ್ಹಾಣ್(8) ಹಾಗೂ ವಿಜಯ ಪಿಂಟು ಚವ್ಹಾಣ್(16) ಮೃತರು. ಕೆರೆಯಲ್ಲಿ ಮೀನು ಹಿಡಿಲು ತೆರಳಿದ್ದಾಗ ವಿದ್ಯುತ್ ತಂತಿ ತುಂಡಾಗಿ ಕೆರೆಗೆ ಬಿದ್ದಿದ್ದನ್ನ ಗಮನಿಸದೆ ಇಬ್ಬರು ಬಾಲಕರು ಕೆರೆಗೆ ಇಳಿದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.