ಮಕ್ಕಳನ್ನು ಹೊರಗಡೆ ತಮ್ಮೊಂದಿಗೆ ಕರೆದುಕೊಂಡು ಹೋದಾಗ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಪೋಷಕರ ಆದ್ಯ ಕರ್ತವ್ಯ. ಮಕ್ಕಳನ್ನು ಅವರ ಪಾಡಿಗೆ ಅವರನ್ನು ಬಿಟ್ಟು ನೀವು ಶಾಪಿಂಗ್‌ನಲ್ಲಿ ಬ್ಯೂಸಿಯಾಗಿ ಬಿಟ್ಟರೆ ಆಘಾತಕಾರಿ ಘಟನೆಗಳಿಗೆ ಕಾರಣವಾಗಬಹುದು. ಸದ್ಯ ಇದೀಗ ಅಂತದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ಒಂದು ಕ್ಷಣ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿ ತನ್ನ ಕುಟುಂಬದೊಂದಿಗೆ ಮಾಲ್ಗೆ ಹೋಗಿರುವುದನ್ನು ಕಾಣಬಹುದು. ಮಾಲ್‌ನ ಎಸ್ಕಲೇಟರ್‌ನಲ್ಲಿ ಹೋಗಿದ್ದ ಬಾಲಕಿಯ ಕಾಲು ಎಸ್ಕಲೇಟರ್‌ನ ಒಳಗೆ ಸಿಲುಕಿಕೊಂಡಿದೆ. ಬಾಲಕಿ ಕಿರುಚಾಡಲು ಪ್ರಾರಂಭಿಸಿದಾಗ ಪೋಷಕರು ಹಿಂದಿರುಗಿ ನೋಡಿ, ರಕ್ಷಿಸಲು ಯತ್ನಿಸಿದ್ದಾರೆ. ಅದೇ ಸಮಯಕ್ಕೆ ಅಲ್ಲಿಂದ ಜೋಕರ್ ವೇಷ ಹಾಕಿಕೊಂಡಿದ್ದ ವ್ಯಕ್ತಿ ಚಲಿಸುತ್ತಿರುವ ಎಸ್ಕಲೇಟರನ್ನು ನಿಲ್ಲಿಸಿದ್ದಾರೆ. ಬಳಿಕ ಮಾಲ್‌ನ ಇತರ ಉದ್ಯೋಗಿಗಳು ಸಹ ಅಲ್ಲಿಗೆ ತಲುಪಿದ್ದು, ಮತ್ತು ಸಾಕಷ್ಟು ಪ್ರಯತ್ನದ ನಂತರ ಬಾಲಕಿಯ ಕಾಲನ್ನು ಒಳಗಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.