ಮಹಾರಾಷ್ಟ್ರ: ಇತ್ತೀಚಿನ ದಿನಗಳಲ್ಲಿ ರೀಲ್ಸ್‌ಗಾಗಿ ಯುವ ಜನತೆಯಲ್ಲಿ ಹುಚ್ಚು ಸಾಹಸ ಪ್ರದರ್ಶಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಡುತ್ತಾರೆ. ಅದರಲ್ಲೂ ಜನಪ್ರಿಯತೆ ಗಳಿಸಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯಲು ತಯಾರಿರುತ್ತಾರೆ. ಇಂತಹ ರೀಲ್ಸ್ ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಅಂತಹದ್ದೇ ಘಟನೆಯೊಂದು ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದಲ್ಲಿ ಘಟನೆ ನಡೆದಿದೆ. ರೀಲ್ಸ್ ಹುಚ್ಚಿಗೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಶ್ವೇತಾ (25) ಮೃತ ದುರ್ದೈವಿ. ಶ್ವೇತಾ ತನ್ನ ಮೂವರು ಸ್ನೇಹಿತರ ಜತೆಗೆ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಪ್ರವಾಸಕ್ಕೆ ತೆರಳಿದ್ದಳು. ಈ ವೇಳೆ ಬೆಟ್ಟದ ತುದಿಯಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡುತ್ತಿದ್ದಳು. ಕಾರಿನೊಳಗೆ ಕುಳಿತ ಶ್ವೇತಾ ರಿವರ್ಸ್ ಗೇರ್‌ನಲ್ಲಿದ್ದ ಕಾರನ್ನು ಚಲಾಯಿಸಿದ್ದಾಳೆ.ಏಕಾಏಕಿ ಜೋರಾಗಿ ಎಕ್ಸಿಲೇಟರ್ ಹೊತ್ತಿದ್ದಾಳೆ. ಅಷ್ಟೇ ನೋಡ ನೋಡುತ್ತಿದ್ದಂತೆ ಜಸ್ಟ್ 15 ಸೆಕೆಂಡ್‌ನಲ್ಲೇ ಯುವತಿ ಕಾರು ಸಮೇತ ಪ್ರಪಾತಕ್ಕೆ ಬಿದ್ದಿದ್ದಾಳೆ.
ಲೈವ್ ಆ್ಯಕ್ಸಿಡೆಂಟ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಪಾತಕ್ಕೆ ಬಿದ್ದ ರಭಸಕ್ಕೆ ಕಾರು ಛಿದ್ರ ಛಿದ್ರವಾಗಿದ್ದರೆ ಶ್ವೇತಾ ಸ್ಪಾಟ್‌ನಲ್ಲೇ ಮೃತಪಟ್ಟಿದ್ದಾಳೆ.