ಮೈಸೂರು ಮೇ 29 : ವೀರ ಸಾವರ್ಕರ್ ಜನ್ಮ ದಿನವಾದ ಮಂಗಳವಾರ ನಗರದ ಕಲಾಮಂದಿರದಲ್ಲಿ ಖ್ಯಾತ ವಾಲ್ಮೀ, ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರಿಗೆ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮೈಸೂರಿನ ವೀರ ಸಾರ್ವಕರ್ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರು ಚಕ್ರವರ್ತಿ ಸೂಲಿಬೆಲೆಯವರಿಗೆ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯನ್ನು ಪ್ರಶಸ್ತಿ ಪತ್ರ, ಒಂದು ಲಕ್ಷರೂ ನಗದು, ಫಲತಾಂಬೂಲದೊಂದಿಗೆ ಪ್ರದಾನ ಮಾಡಿ, ಸನ್ಮಾನಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ವೀರಸಾರ್ವಕರ್ ಅವರು ಗೋ ಪೂಜೆ ಮಾಡುವ ಮುನ್ನಾ ಗೋವುಗಳ ರಕ್ಷಣೆ, ಪೋಷಣೆ ಮಾಡಿ ಎಂದು ಹೇಳುತ್ತಿದ್ದರು. ಹಾಗಾಗಿ ಪ್ರಶಸ್ತಿಯೊಂದಿಗೆ ನನಗೆ ನೀಡಲಿರುವ ಒಂದು ಲಕ್ಷರೂ ಹಣವನ್ನು ಗೋವುಗಳ ಪೋಷಣೆ, ರಕ್ಷಣೆಗೆಂದು ಗೋಶಾಲೆಗೆ ನೀಡುವುದಾಗಿ ತಿಳಿಸಿದರು.
ಪ್ರದಾನಿ ನರೇಂದ್ರಮೋದಿಯವರ ಆಡಳಿತದಿಂದಾಗಿ ಭಾರತ ಈಗ ಆರ್ಥಿಕತೆಯಲ್ಲಿ ಬಹಳ ಬಲಿಷ್ಠವಾಗುತ್ತಿದೆ. ಐದನೇ ಸ್ಥಾನಕ್ಕೆ ಬಂದಿದೆ. ಶೀಘ್ರದಲ್ಲೇ ಮೂರನೇ ಸ್ಥಾನಕ್ಕೆ ಬರಲಿದೆ. ಭಾರತದ ಜಿಡಿಪಿ ಬೆಳೆಯುತ್ತಿದೆ. ರಫ್ತು ಪ್ರಮಾಣ ಹೆಚ್ಚಾಗುತ್ತಿದೆ. ಎನ್‌ಡಿಎ ಮೈತ್ರಿ ಕೂಟ 400 ಸ್ಥಾನಗಳನ್ನು ಗೆಲ್ಲಬಾರದು, ನರೇಂದ್ರಮೋದಿಯವರು ಮತ್ತೆ ಪ್ರಧಾನಮಂತ್ರಿಯಾಗಬಾರದೆಂದು ವಿಪಕ್ಷಗಳು ಏನೆಲ್ಲಾ ಕುತಂತ್ರ, ಕಾರ್ಯತಂತ್ರಗಳನ್ನು ಮಾಡಿದ್ದರೂ, ಮೋದಿಯವರು ಬಹಳ ಸರಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದಾರೆ. ಮತ್ತೆ ಪ್ರಧಾನಮಂತ್ರಿಯಾಗಲಿದೆ. ಮುಂದಿನ ಐದುವರ್ಷಗಳಲ್ಲಿ ಭಾರತ ಮೋದಿಯವರ ಆಡಳಿತದಲ್ಲಿ ಮತ್ತಷ್ಟು ಬದಲಾಗಿದೆ. ವಿಶ್ವದ ಅತಿ ದೊಡ್ಡ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನೇತೃತ್ವದ ಐಎನ್‌ಡಿಎ ಮೈತ್ರಿಕೂಟ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಅಧಿಕಾರಕ್ಕೆ ಬಂದರೆ, ಅದಕ್ಕೆ ರಾಹುಲ್ ಗಾಂಧಿ ಕಾರಣವಾಗುತ್ತಾರೆ, ಆದರೆ ಸೋತರೆ, ಅದರ ಹೊಣೆಯನ್ನು ಮಲ್ಲಿಕಾರ್ಜುನ ಖರ್ಗೆಯವರ ತಲೆಗೆ ಕಟ್ಟುತ್ತಾರೆ. ಹಸಿವಿನ ಸೂಚಾಂಕವೇ ಹಸಿ ಸುಳ್ಳಿನಿಂದ ಕೂಡಿದೆ. ಭಾರತದಿಂದ ಸಹಾಯ ಪಡೆಯುತ್ತಿರುವ ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳು ಹಸಿವಿನ ಸೂಚ್ಯಾಂಕದಲ್ಲಿ ಬಹಳ ಕಡಿಮೆ ಇರುವ ದೇಶಗಳ ಸಾಲಿನಲ್ಲಿದ್ದರೆ, ಭಾರತ ಅದರ ನಂತರದ ಕೆಳ ಸ್ಥಾನಗಳಲ್ಲಿ ಇದೆ. ಭಾರತದ ವಿರುದ್ಧ ಸಾಕಷ್ಟು ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ. ಕಾಂಗ್ರೆಸ್‌ನ ಮಣಿಶಂಕರ್ ಅಯ್ಯರ್ ನಂತವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನ ಹಲವು ಮಂದಿ ಈ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರೇನು ಭಾರತದವರ, ಅಥವಾ ಪಾಕಿಸ್ತಾನದವರಾ ಎಂದು ಕಿಡಿಕಾರಿದರು.
ಅರ್ಬನ್ ನಕ್ಸಲರು ಐಟಿ, ಬಿಟಿ ಕಂಪನಿಗಳು, ಕಾಲೇಜ್, ವಿಶ್ವವಿದ್ಯಾನಿಲಯಗಳಲ್ಲಿ ಭಾರತದ ವಿರುದ್ಧ ಹಾಗೂ ಮೋದಿಯವರ ಆಡಳಿತದಿಂದಾಗಿ ಭಾರತದ ಆರ್ಥಿಕತೆ ಬಿದ್ದು ಹೋಗುತ್ತದೆ, ದೇಶ ಇಬ್ಬಾಗವಾಗುತ್ತದೆ. ಸಂವಿಧಾನ ಬದಲಾಯಿಸಿ ಬಿಡುತ್ತಾರೆ ಇನ್ನೂ ಮುಂತಾದ ಹಸಿ ಸುಳ್ಳಗಳನ್ನು ಹೇಳಿ, ಅಪಪ್ರಚಾರಗಳನ್ನು ವ್ಯಾಪಕವಾಗಿ ಮಾಡುವ ಮೂಲಕ ಸುಳ್ಳೆನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಯಶಸ್ವಿನಿ, ಶಿವಕುಮಾರ್ ಚಿಕ್ಕಕಾನ್ಯ, ರಾಕೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.