ಹೊನ್ನಾವರದಲ್ಲಿ ಹಿಂಬದಿಯಿಂದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ-ಕೆಲಕಾಲ ವಿದ್ಯುತ್‌ ಸ್ಥಗೀತ…

ಹೊನ್ನಾವರ : ಪಟ್ಟಣದ ಶಿರಸಿ ಅರ್ಬನ್‌ ಬ್ಯಾಂಕ್‌ ಎದುರಿಗಿರುವ ವಿದ್ಯುತ್‌ ಕಂಬಕ್ಕೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್‌ ಕಂಬ ಬಾಗಿ ಬೆಂಡಾಗಿರುವ ಘಟನೆ ನಡೆದಿದೆ..

ಹೊನ್ನಾವರ ಪಟ್ಟಣದ ಶಿರಸಿ ಅರ್ಬನ್‌ ಬ್ಯಾಂಕ್‌ ಎದುರಿಗಿರುವ ವಿದ್ಯುತ್‌ ಕಂಬಕ್ಕೆ ಬೆಳ್ಳಂಬೆಳೆಗ್ಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್‌ ಕಂಬ ಬಾಗಿ ಬೆಂಡಾಗಿದ್ದು, ಕೆಲಕಾಲ ವಿದ್ಯುತ್‌ ವ್ಯತಯ ಉಂಟಾದ ಘಟನೆ ನಡೆದಿದೆ. ಬೆಳೆಗ್ಗೆ 9 ಗಂಟೆಗೆ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶ ಮೂಲದ ಲಾರಿಯೊಂದರ ಚಾಲಕ ಹಿಂಬದಿ ತಿರುಗಿಸುತ್ತಿರುವ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ..

ಡಿಕ್ಕಿಯ ರಭಸಕ್ಕೆ ಮುರಿದು ಬಿದ್ದ ವಿದ್ಯುತ್‌ ಕಂಬ ಮುರಿದು ಬೆಂಡಾಗಿದ್ದು, ಸ್ಥಳಕ್ಕೆ ಕೆಇಬಿ ಸಿಬ್ಬಂದಿಗಳು ಆಗಮಿಸಿ ವಿದ್ಯುತ್‌ ಕಂಬ ದುರಸ್ತಿ ಪಡಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇನ್ನೂ ವಾಹನಗಳು ಏಕಮುಖ ಸಂಚಾರದಿಂದ ಬಸ್‌ ನಿಲ್ದಾಣದ ಎದುರು ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇನ್ನೂ ವಿದ್ಯುತ್‌ ಕಂಬ ದುರಸ್ತಿಯ ಕಾರಣಕ್ಕಾಗಿ ಸುತ್ತಮುತ್ತ ಸಂಪರ್ಕ ಕಲ್ಪಿಸುವ ನಗರಗಳಿಗೆ ಕೆಲಕಾಲ ವಿದ್ಯುತ್‌ ಕಡಿತಗೊಳಿಸಲಾಗಿದೆ..