Lok Sabha Election 2024: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೆಲವು ಸಚಿವರನ್ನು ಆಯ್ಕೆ ಮಾಡಿದ್ದರೆ, ಮತ್ತೆ ಕೆಲವರು ಹಿರಿಯ ಶಾಸಕರಿಗೆ ಮಣೆ ಹಾಕಲಾಗಿದೆ. ಇದರ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿ ಕೈ ತಪ್ಪಿ ಅಸಮಾಧಾನಗೊಂಡಿರುವ ನಾಯಕರಿಗೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ಪಕ್ಷವು ನಿಮ್ಮ ಸೇವೆಯನ್ನು ಪರಿಗಣಿಸುತ್ತದೆ ಎಂಬ ಸಂದೇಶವನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಕಳೆದ ರಾಜ್ಯಸಭಾ ಚನಾವಣೆ ಫಲಿತಾಂಶದ ದಿನ ವಿಧಾನಸೌಧದಲ್ಲಿ ಮೊಳಗಿದ್ದ ಪಾಕ್ ಪಾರ ಘೋಷಣೆ ಕೇಸ್‌ನಲ್ಲಿ ವಿವಾದಕ್ಕೊಳಗಾಗಿದ್ದ ನಾಸಿರ್ ಹುಸೇನ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರ (Congress Star campaigners) ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟು 40 ಸ್ಟಾರ್ ಪ್ರಚಾರಕರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್‌ಗೆ (Nasir Hussain) ಸ್ಥಾನ ಕಲ್ಪಿಸಲಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸಿರ್ ಹುಸೇನ್ ವಿವಾದಕ್ಕೊಳಗಾಗಿದ್ದರು. ಅಲ್ಲದೆ, ಇದನ್ನು ಪ್ರಶ್ನೆ ಮಾಡಿದ್ದ ಮಾಧ್ಯಮಗಳ ಮೇಲೂ ಹರಿಹಾಯ್ದಿದ್ದರು. ಆದರೆ, ಈಗ ಅವರನ್ನು ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಗೆ ಸೇರಿಸಲಾಗಿದೆ.
ಟಿಕೆಟ್ ವಂಚಿತ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಎಲ್. ಹನುಮಂತಯ್ಯ ಅವರಿಗೂ ಸ್ಟಾರ್ ಕ್ಯಾಂಪೇನರ್ ಸ್ಥಾನವನ್ನು ಕೊಡಲಾಗಿದೆ. ಈ ಮೂಲಕ ಅಸಮಾಧಾನಿತರನ್ನು ಸಮಾಧಾನ ಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.
ಕಾಂಗ್ರೆಸ್ ಸ್ಟಾರ್ ಪ್ರಚಾರಕರು ಇವರು
- ಮಲ್ಲಿಕಾರ್ಜುನ ಖರ್ಗೆ
- ಸೋನಿಯಾ ಗಾಂಧಿ
- ರಾಹುಲ್ ಗಾಂಧಿ
- ಡಿಸಿಎಂ ಡಿ.ಕೆ. ಶಿವಕುಮಾರ್
- ಸಿಎಂ ಸಿದ್ದರಾಮಯ್ಯ
- ಪ್ರಿಯಾಂಕಾ ಗಾಂಧಿ
- ರಣದೀಪ್ ಸಿಂಗ್ ಸುರ್ಜೆವಾಲಾ
- ವೀರಪ್ಪ ಮೊಯ್ಲಿ
- ಬಿ.ವಿ. ಶ್ರೀನಿವಾಸ್
- ಲಕ್ಷ್ಮಣ ಸವದಿ
- ಈಶ್ವರ್ ಖಂಡ್ರೆ
- ವಿನಯಕುಮಾರ್ ಸೊರಕೆ
- ಬಿ.ಕೆ. ಹರಿಪ್ರಸಾದ್
- ಆರ್.ವಿ. ದೇಶಪಾಂಡೆ
- ಡಾ.ಜಿ. ಪರಮೇಶ್ವರ್
- ಎಚ್.ಕೆ. ಪಾಟೀಲ್
- ಎಂ.ಬಿ. ಪಾಟೀಲ್
- ದಿನೇಶ್ ಗುಂಡೂರಾವ್
- ಕೃಷ್ಣ ಭೈರೇಗೌಡ
- ಎಚ್.ಎಂ. ರೇವಣ್ಣ
- ಪಿಜಿಆರ್ ಸಿಂಧ್ಯಾ
- ಬಿ. ಸೋಮಶೇಖರ್
- ಎಲ್. ಹನುಮಂತಯ್ಯ
- ಜಿ.ಸಿ. ಚಂದ್ರಶೇಖರ
- ಸೈಯದ್ ನಾಸಿರ್ ಹುಸೇನ್
- ಅಭಿಷೇಕ್ ದತ್
- ಝಮೀರ್ ಅಹಮದ್ ಖಾನ್
- ಮಧು ಬಂಗಾರಪ್ಪ
- ಪಿ.ಟಿ. ಪರಮೇಶ್ವರ್ ನಾಯಕ್
- ವಿ.ಎಸ್. ಉಗ್ರಪ್ಪ
- ಸತೀಶ್ ಜಾರಕಿಹೊಳಿ
- ತನ್ವೀರ್ ಸೇಠ್
- ಪುಷ್ಪಾ ಅಮರನಾಥ್
- ಉಮಾಶ್ರೀ
ಇವರಲ್ಲಿ ಕೆಲವು ಸಚಿವರನ್ನು ಆಯ್ಕೆ ಮಾಡಿದ್ದರೆ, ಮತ್ತೆ ಕೆಲವರು ಹಿರಿಯ ಶಾಸಕರಿಗೆ ಮಣೆ ಹಾಕಲಾಗಿದೆ. ಇದರ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿ ಕೈ ತಪ್ಪಿ ಅಸಮಾಧಾನಗೊಂಡಿರುವ ನಾಯಕರಿಗೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ಪಕ್ಷವು ನಿಮ್ಮ ಸೇವೆ