ಲೋಕಸಭಾ ಚುನಾವಣೆಗೆ ಶ್ರೀಧರ್ ರೆಡ್ಡಿಗೆ ಪುಟ್ಟಪರ್ತಿಯ ಅಭ್ಯರ್ಥಿಯಾಗಿ ಟಿಕೆಟ್ ನೀಡಿರುವುದನ್ನು ಖಂಡಿಸಿ ಮಹೇಶ್ವರರೆಡ್ಡಿ ಎಂಬ ವ್ಯಕ್ತಿ ತನ್ನ ಅರ್ಧ ತಲೆಕೂದಲು ಹಾಗೂ ಮೀಸೆ ಬೋಳಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟಪರ್ತಿಯ ಸತ್ಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಮಹೇಶ್ವರರೆಡ್ಡಿ ಅರ್ಧ ಮೀಸೆ ಬೋಳಿಸಿದ್ದಾರೆ.
ಆಂಧ್ರಪ್ರದೇಶ ಮಾರ್ಚ್ 17 : ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಶ್ರೀಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯ ವೈಸಿಪಿ ಟಿಕೆಟ್ ಶ್ರೀಧರ್ ರೆಡ್ಡಿಗೆ ಸಿಗುವುದಿಲ್ಲ ಎಂದು ವ್ಯಕ್ತಯೊಬ್ಬರು ಬೆಟ್ಟಿಂಗ್ ಹಾಕಿದ್ದರು. ಇದಲ್ಲದೇ ಶ್ರೀಧರ್ ರೆಡ್ಡಿಗೆ ವೈಸಿಪಿ ಟಿಕೆಟ್ ಕೊಟ್ಟರೆ ,ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆ ತೆಗೆಸುತ್ತೇನೆ ಎಂದು ಪಣತೊಟ್ಟಿದ್ದರು. ಅಂತಿಮವಾಗಿ ಪುಟ್ಟಪರ್ತಿ ವೈಸಿಪಿ ಟಿಕೆಟ್‌ಗೆ ಶ್ರೀಧರ್ ರೆಡ್ಡಿ ಹೆಸರನ್ನು ವೈಸಿಪಿ ಘೋಷಿಸಿದೆ. ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಮಹೇಶ್ವರ್ ರೆಡ್ಡಿ ಎಂಬ ವ್ಯಕ್ತಿ ತನ್ನ ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆ ಬೋಳಿಸಿದ್ದಾನೆ.
ಶ್ರೀಧರ್ ರೆಡ್ಡಿಗೆ ಪುಟ್ಟಪರ್ತಿ ಟಿಕೆಟ್ ನೀಡಿರುವುದನ್ನು ಮಹೇಶ್ವರರೆಡ್ಡಿ ಈ ರೀತಿಯಾಗಿ ಪ್ರತಿಭಟಿಸಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪುಟ್ಟಪರ್ತಿಯ ಸತ್ಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಮಹೇಶ್ವರರೆಡ್ಡಿ ಅರ್ಧ ಮೀಸೆ ಬೋಳಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಗಬಾರದು ಎಂದು ಪಣತೊಟ್ಟಿರುವ ಮಹೇಶ್ವರ್ ರೆಡ್ಡಿ ಈ ಹಿಂದೆ ಶಾಸಕ ಶ್ರೀಧರ್ ರೆಡ್ಡಿ ಅವರ ಕಾರು ಚಾಲಕನಾಗಿ ಕೆಲಸ ಮಾಡಿದ್ದರು. ಬಂಗಾರರಾಜು ಮಹೇಶ್ವರ್ ರೆಡ್ಡಿ ಅವರು ಅರ್ಧ ತಲೆಕೂದಲು ಮೀಸೆ ಬೋಳಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.