ಕುಮಟಾ ಮಾರ್ಚ್ 10 : ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಸ್ಮಿತಾ(23), ನಿಹಾರಿಕಾ(22), ಪವಿತ್ರಾ(22) ರಕ್ಷಣೆಗೊಳಗಾದ ಪ್ರವಾಸಿಗರು.
ಬೆಂಗಳೂರಿನ ಜಯನಗರ ನಿವಾಸಿಗಳಾದ ಈ ಮೂವರು ಸಮುದ್ರದಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದನ್ನೂ ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ನವೀನ್ ಅಂಬಿಗ, ಮಂಜುನಾಥ ಹರಿಕಂತ್ರ ಎಂಬುವವರು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.