ಸೆಲಾ ಪಾಸ್ ಸುರಂಗ ಮಾರ್ಗವು ರಾಜತಾಂತ್ರಿಕ ದೃಷ್ಟಿಕೋನದಿಂದ ಕೂಡ ಭಾರತಕ್ಕೆ ಬಹು ಮುಖ್ಯವಾಗಿದೆ. ಜಗತ್ತಿನ ಅತಿ ಎತ್ತರದ ಪ್ರದೇಶದಲ್ಲಿ ಲೋಕಾರ್ಪಣೆಗೊಂಡಿರುವ ಈ ಅತಿ ಉದ್ದದ ಸುರಂಗ ಮಾರ್ಗದ ವಿಶೇಷತೆಗಳೇನು? ಅಲ್ಲದೆ, ಇದು ಜನ ಸಾಮಾನ್ಯ ಮತ್ತು ಸೈನ್ಯಕ್ಕೆ ಯಾವ ರೀತಿಯ ಪ್ರಯೋಜನವನ್ನು ನೀಡಲಿದೆ ಎಂಬ ಮಾಹಿತಿ ಇಲ್ಲಿದೆ.
ನವದೆಹಲಿ, ಮಾರ್ಚ್ 9 : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈಶಾನ್ಯ ಪ್ರವಾಸದ ಎರಡನೇ ದಿನವಾದ ಶನಿವಾರ ಅರುಣಾಚಲ ಪ್ರದೇಶಕ್ಕೆ (Arunachal Pradesh) ಭೇಟಿ ನೀಡಿದ್ದು, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ, ವಿಶ್ವದ ಅತಿ ಎತ್ತರದಲ್ಲಿ (13000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ (Sela Pass) ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು. ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ತಲುಪಲು ಇದು ಏಕೈಕ ಮಾರ್ಗವಾಗಿದೆ.
ರಾಜತಾಂತ್ರಿಕ ದೃಷ್ಟಿಕೋನದಿಂದ ಭಾರತಕ್ಕೆ ಸೆಲಾ ಪಾಸ್ ಸುರಂಗ ಮಾರ್ಗವು ಬಹಳ ಮುಖ್ಯವಾಗಿದೆ. ಈ ಸುರಂಗ ಮಾರ್ಗದ ವಿಶೇಷತೆಗಳೇನು? ಅಲ್ಲದೆ, ಇದು ಸಾಮಾನ್ಯ ಜನರಿಗೆ ಮತ್ತು ಸೈನ್ಯಕ್ಕೆ ಯಾವ ರೀತಿಯ ಪ್ರಯೋಜನವನ್ನು ನೀಡಲಿದೆ ಎಂಬ ಮಾಹಿತಿ ಇಲ್ಲಿದೆ.
ಸೆಲಾ ಪಾಸ್ ಮಾರ್ಗ ಏಕೆ ಮುಖ್ಯ?
ಪ್ರಸ್ತುತ ಸೆಲಾ ಪಾಸ್‌ನಲ್ಲಿ, ಭಾರತೀಯ ಸೇನೆಯ ಸೈನಿಕರು ಮತ್ತು ಪ್ರದೇಶದ ಜನರು ತವಾಂಗ್ ತಲುಪಲು ಬಲಿಪರಾ-ಚರಿದುವಾರ್ ರಸ್ತೆಯನ್ನು ಬಳಸುತ್ತಿದ್ದಾರೆ. ಚಳಿಗಾಲದಲ್ಲಿ ಅತಿಯಾದ ಹಿಮಪಾತದಿಂದಾಗಿ, ಸೆಲಾ ಪಾಸ್‌ನಲ್ಲಿ ತೀವ್ರವಾದ ಹಿಮವು ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ಅಲ್ಲದೆ, ಸೆಲಾ ಪಾಸ್ 30 ತಿರುವುಗಳನ್ನು ಹೊಂದಿದೆ, ಇದು ತುಂಬಾ ಅಂಕುಡೊಂಕಾದವು. ಇದರಿಂದಾಗಿ ಇಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಪ್ರಯಾಣಕ್ಕೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಸಮಯದಲ್ಲಿ ಇಡೀ ತವಾಂಗ್ ವಲಯವು ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಸೆಲಾ ಪಾಸ್ ಸುರಂಗವು ಅಸ್ತಿತ್ವದಲ್ಲಿರುವ ರಸ್ತೆಯನ್ನು ಬೈಪಾಸ್ ಮಾಡುತ್ತದೆ ಮತ್ತು ಇದು ಬೈಸಾಖಿಯನ್ನು ನುರಾನಾಂಗ್‌ಗೆ ಸಂಪರ್ಕಿಸುತ್ತದೆ.
ಒಟ್ಟು 11.84 ಕಿಲೋಮೀಟರ್ ಉದ್ದದ ಮಾರ್ಗ
ಸೆಲಾ ಫಾಸ್ ಸುರಂಗ ಯೋಜನೆಯ ಒಟ್ಟು ಉದ್ದ 11.84 ಕಿಲೋಮೀಟರ್. ಇದು ಸುರಂಗಗಳು ಮತ್ತು ರಸ್ತೆಗಳನ್ನು ಒಳಗೊಂಡಿದೆ. ಪಶ್ಚಿಮ ಕ್ಯೂಮಿಂಗ್ ಜಿಲ್ಲೆಯ (ಬೈಸಾಖಿ) ಕಡೆಗೆ 7.2 ಕಿಲೋಮೀಟರ್ ತಲುಪಿದ ನಂತರ ನಾವು ಸುರಂಗ-1 ಅನ್ನು ಪ್ರವೇಶಿಸುತ್ತೇವೆ. ಇದರ ಉದ್ದ ಸುಮಾರು 1 ಕಿಲೋಮೀಟರ್. ಇದರ ನಂತರ ರಸ್ತೆ ಬರುತ್ತದೆ, ಇದರ ಉದ್ದ 1.2 ಕಿಲೋಮೀಟರ್. ಇದರ ನಂತರ ಸುರಂಗ -2 ಬರುತ್ತದೆ. ಇದರ ಉದ್ದ 1.591 ಕಿಲೋಮೀಟರ್. ಸುರಂಗದಿಂದ ಹೊರಬಂದ ನಂತರ, ಮೂರನೇ ರಸ್ತೆ ಇದೆ, ಇದು ನುರಾನಾಂಗ್ ಕಡೆಗೆ ಹೋಗುತ್ತದೆ, ಅದರ ಉದ್ದ 770 ಮೀಟರ್.
ಸೆಲಾ ಸುರಂಗ ಮಾರ್ಗದ ಇನ್ನಷ್ಟು ವಿಶೇಷ
– ಸೆಲಾ ಸುರಂಗವು 13,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ದ್ವಿಪಥ ಸುರಂಗ ಮಾರ್ಗವಾಗಿದೆ.
– ಸುರಂಗ 1 ಮತ್ತು ಸುರಂಗ 2 ಅರುಣಾಚಲ ಪ್ರದೇಶದ ತವಾಂಗ್ ಮತ್ತು ಪಶ್ಚಿಮ ಕಮೆಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
– ಸುರಂಗದ ಒಟ್ಟು ಉದ್ದ 11.84 ಕಿಲೋಮೀಟರ್.
– ಎರಡನೇ ಸುರಂಗವು 993 ಮೀಟರ್ ಉದ್ದವಿದೆ.
– ಸುರಂಗ 2 ರಲ್ಲಿ ಸಂಚಾರಕ್ಕಾಗಿ ಬೈ-ಲೇನ್ ಟ್ಯೂಬ್ ಮತ್ತು ಎಸ್ಕೇಪ್ ಟ್ಯೂಬ್ ಅನ್ನು ನಿರ್ಮಿಸಲಾಗಿದೆ.
ಮುಖ್ಯ ಸುರಂಗದ ಜೊತೆಗೆ ಇದೇ ಉದ್ದದ ಮತ್ತೊಂದು ಸುರಂಗವನ್ನು ನಿರ್ಮಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಇದು ಉಪಯುಕ್ತವಾಗಲಿದೆ.
– ಸಂಪೂರ್ಣ ಸ್ವದೇಶಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸುರಂಗಗಳನ್ನು ನಿರ್ಮಿಸಲಾಗಿದೆ.
ಸುರಂಗದ ಮಾರ್ಗದಲ್ಲಿ ಹಿಮಪಾತದ ಪರಿಣಾಮ, ಸಮಸ್ಯೆ ಇರುವುದಿಲ್ಲ.
ಯೋಜನೆಯಡಿ ಎರಡು ರಸ್ತೆಗಳನ್ನು (7 ಕಿಲೋಮೀಟರ್ ಮತ್ತು 1.3 ಕಿಲೋಮೀಟರ್) ಸಹ ನಿರ್ಮಿಸಲಾಗಿದೆ.