ಕುಮಟಾ – ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಭಂದಿಸಿದಂತೆ , ಮತ ಎಣಿಕಾ ಕೇಂದ್ರ ಮತ್ತು ಸ್ಟಾçಂಗ್ ರೂಂ ನಿರ್ಮಾಣದ ಕುರಿತಂತೆ ಪಟ್ಟಣದ ಡಾ.ಎ.ವಿ. ಬಾಳಿಗಾ ಕಾಲೇಜಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ಕಾಲೇಜಿಗೆ ಭೇಟಿ ನೀಡಿದ ಅವರು ವಿವಿಧ ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ಜಿಲ್ಲಾ ಪೊಲೀಸ್ ಅಧಿಕ್ಷಕ ವಿಷ್ಣುವರ್ಧನ್ ಎನ್., ಜಿ.ಪಂ ಸಿಇಓ ಈಶ್ವರ ಕಾಂದೂ ಕುಮಟಾ ತಹಸೀಲ್ದಾರ್ ಪ್ರವೀಣ ಕರಾಂಡೆ ಮತ್ತಿತರರು ಉಪಸ್ಥಿತರಿದ್ದರು.