ಧಾರಾಕಾರ ಮಳೆಗೆ ನೆಲಸಮವಾಯ್ತು ಮನೆ.! ತಪ್ಪಿದ ಮಹಾ ದುರಂತ.! ಮನೆಯಲ್ಲಿದ್ದವರು ಬಚಾವಾಗಿದ್ದು ಹೇಗೆ.?

ಯಲ್ಲಾಪುರ: ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಸಂಕದಗುಂಡಿಯಲ್ಲಿ ತಿಮ್ಮಣ್ಣ ಹನುಮಂತಪ್ಪ ವಡ್ಡರ್ ಎನ್ನುವವರಿಗೆ ಸೇರಿದ ವಾಸ್ತವ್ಯದ ಮನೆಯೊಂದು ರಾತ್ರಿ ಸುರಿದ ಭಾರೀ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ.

ಮಧ್ಯರಾತ್ರಿಯ ಹೊತ್ತಿಗೆ ಮನೆ ಕುಸಿಯುವಾಗ ಮನೆಮಂದಿಯೆಲ್ಲ ಕಾತೂರಿನ ನೆಂಟರ ಮನೆಗೆ ಹೋಗಿದ್ದರಿಂದ ಯಾರಿಗೂ ಏನೂ ಅಪಾಯ ಆಗಿಲ್ಲ. ಘಟನೆಯಿಂದ ಮನೆಯೊಳಗಿನ ಅಕ್ಕಿ, ಕಾಳುಕಡಿ, ಬಟ್ಟೆ, ಪಾತ್ರೆಗಳೆಲ್ಲ ಮಣ್ಣಿನಡಿಗೆ ಸಿಲುಕಿದೆ.

ವಿಷಯ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ. ಅಧ್ಯಕ್ಷೆ ರೂಪಾ ಪೂಜಾರಿ, ಪಿ.ಡಿ.ಒ.ಗೋವಿಂದ ಜಿ.ಶೆಟ್ಟಿ, ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ, ಗ್ರಾ.ಪಂ. ಸ್ಥಳೀಯ ಸದಸ್ಯರಾದ ಕುಪ್ಪಯ್ಯ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.