ದಾಂಡೇಲಿ : ಮೊಸಳೆವೊಂದು ಸತ್ತುಹೋಗಿದೆ ಎಂದು ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಅದನ್ನು ಹಿಡಿಯುತ್ತಿದ್ದಂತೆಯೆ ಜೀವಂತವಿರುವುದು ದೃಢವಾಗಿರುವ ಘಟನೆ ನಗರದ ಕುಳಗಿ ರಸ್ತೆಯ ಸೇತುವೆಯ ಕೆಳಗಡೆ ಕಾಳಿ ನದಿಯಲ್ಲಿ ಗುರುವಾರ ನಡೆದಿದೆ.
ಇಲ್ಲಿ ನದಿಯಲ್ಲಿ ಮೊಸಳೆಯೊಂದು ಸತ್ತು ಬಿದ್ದಿದೆ ಎಂಬ ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಡವರಿಯದೆ ಸ್ಥಳಕ್ಕೆ ಧಾವಿಸಿ ನದಿಗಿಳೆದು ಮೊಸಳೆಯನ್ನು ಹಿಡಿಯಲು ಹೋಗಿದ್ದರು. ಮೊಸಳೆಯ ಹತ್ತಿರ ಹೋಗಿ ಮೊಸಳೆಯ ಬಾಲವನ್ನು ಹಿಡಿಯುತ್ತಿದ್ದಂತೆ ಮೊಸಳೆ ಎಚ್ಚರಗೊಂಡು ಒಮ್ಮೆಲೆ ಭಯಗೊಂಡು ಮುಂದೆ ಹೋಗಿದೆ. ಮೊಸಳೆ ಸತ್ತಿದೆ ಎಂದುಕೊಂಡಿದ್ದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನಂತರ ಮೊಸಳೆ ಜೀವಂತವಾಗಿ ಇರುವುದನ್ನು ದೃಢಪಡಿಸಿದ್ದಾರೆ.