X Trending: ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆದ ರಾಮಮಂದಿರ ಪ್ರಾಣ ಪ್ರತಿಷ್ಠಾ: ಎಲ್ಲೆಲ್ಲೂ ರಾಮನದ್ದೇ ಸುದ್ದಿ

ಅಯೋಧ್ಯೆಯಲ್ಲಿ ಅದ್ಧೂರಿ ಆಚರಣೆಗಳ ನಡುವೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಿದೆ. ಇಡೀ ಭಾರತವೇ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿದರು. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ದೇಶದ ದೊಡ್ಡ ಸೆಲೆಬ್ರಿಟಿಗಳು ಪಾಲ್ಗೊಂಡರು. ಸಮಾರಂಭಕ್ಕೆ 1000 ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಖತ್ ಟ್ರೆಂಡ್ ಸೃಷ್ಟಿಸಿದೆ.

ಪ್ರಸಿದ್ಧ ಜಾಲತಾಣ ಎಕ್ಸ್ (ಟ್ವಿಟ್ಟರ್) ನಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಹ್ಯಾಶ್​ಟ್ಯಾಗ್ ಮೊದಲ ಸಾಲಿನಲ್ಲೇ ಟ್ರೆಂಡ್​ನಲ್ಲಿದೆ. #RamMandirPranPrathistha, #RamLallaVirajman, श्री राम, #राम_का_भव्य_धाम, #जय_सियाराम, #BabriZindaHai, प्रभु राम, Jai Siya Ram, जीवन धन्य, राजा राम, Lord Ram ಸೇರಿದಂತೆ ಅನೇಕ ಹ್ಯಾಶ್​ಟ್ಯಾಗ್ ಟ್ರೆಂಡಿಂಗ್​ನಲ್ಲಿದೆ.

Ram Mandir Twitter Trend

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗತ್ ಹಾಗೂ ನೂರಾರು ಗಣ್ಯರ ಸಮ್ಮುಖದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭ ನೆರವೇರಿತು. ಚಿನ್ನ ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಇಂದು ಅಯೋಧ್ಯೆ ದೇವಸ್ಥಾನದಲ್ಲಿ ಭವ್ಯವಾದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಸ್ವಲ್ಪ ಮೊದಲಷ್ಟೆ ಬಹಿರಂಗಪಡಿಸಲಾಯಿತು. ತಲೆಯಿಂದ ಪಾದದವರೆಗೆ ರಾಮಲಲ್ಲಾನನ್ನು ಆಭರಣಗಳಿಂದ ಶೃಂಗರಿಸಲಾಗಿದೆ. ರಾಮಲಲ್ಲಾ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವಿದೆ. ಹಣೆಗೆ ಬೆಳ್ಳಿ ಮತ್ತು ಕೆಂಪು ತಿಲಕದಿಂದ ಅಲಂಕರಿಸಲಾಗಿದೆ.