ಯಲ್ಲಾಪುರ: ಮಹಾಪುರುಷರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಶ್ರೇಷ್ಠತೆ ಸಾಧಿಸಬೇಕು ಎಂದು
ಸಾಮಾಜಿಕ ಕಾರ್ಯಕರ್ತ ಶೇಷಗಿರಿ ಪ್ರಭು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಕಾಳಮ್ಮನಗರ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿವೇಕಾನಂದರು ವಿಶ್ವಕ್ಕೆ ಭಾರತದ ಶ್ರೇಷ್ಠತೆಯನ್ನು ತಂದುಕೊಟ್ಟಿದ್ದಾರೆ. ಅವರ ಸಾಧನೆ ಅನುಕರಣೀಯ ಎಂದರು.
ಬಿಇಒ ಎನ್ ಆರ್ ಹೆಗಡೆ ನೂತನವಾಗಿ ನಿರ್ಮಿಸಿದ ಸಭಾ ಮಂಟಪ ಉದ್ಘಾಟಿಸಿದರು. ಆರಾಧ್ಯ,ಅದ್ನಾನ್ ಶೇಖ್ ಅದೃಷ್ಟ ವಿದ್ಯಾರ್ಥಿ ಗಳಾಗಿ ಆಯ್ಕೆಯಾದರು.
ವಿವೇಕಾನಂದ ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷ ರವೀಂದ್ರ ಪ್ರಭು ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ, ಸಿ ಆರ್ಪಿ ಸಂಜೀವಕುಮಾರ ಹೊಸ್ಕೇರಿ,ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಗಡೆ, ಸಂಸ್ಥೆಯ ಅಧ್ಯಕ್ಷ ವಿನಾಯಕ ಪೈ, ಶಿಕ್ಷಕರಾದ ಸೀತಾ ಪಾವಸ್ಕರ್,ದೇವರಾಜ ಪಟಗಾರ ಭಾಗವಹಿಸಿದ್ದರು.