ಬಸ್ ತಡವಾಗಿ ಬಂದಿರುವುದಕ್ಕೆ ದಾಂಡೇಲಿಯಲ್ಲಿ ಚಾಲಕನ ಮೇಲೆ‌ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು

ದಾಂಡೇಲಿ : ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ ಅರ್ಧ ಗಂಟೆ‌ ತಡವಾಗಿ ಬಂದಿರುವುದಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸೋಮವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ದಾಂಡೇಲಿಯಿಂದ ಹಳಿಯಾಳ, ಧಾರವಾಡಕ್ಕೆ ಹೋಗುವ ಪ್ರಯಾಣಿಕರು ದಾಂಡೇಲಿ ಟು ಧಾರವಾಡ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದರು. ನಿಗದಿತ ಸಮಯಕ್ಕೆ ಬರದೆ ವಿಳಂಬವಾಗಿ ಬಸ್ ಬಂದ ಹಿನ್ನಲೆಯಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣಕ್ಕೆ ನೂಕು ನುಗ್ಗಲು ಉಂಟಾಗಿತ್ತು. ನಿಗದಿತ ಸಮಯಕ್ಕೆ ಬಸ್ ಬರುತ್ತಿದ್ದಲ್ಲಿ, ಈ ಸಮಸ್ಯೆ ನಿರ್ಮಾಣವಾಗುತ್ತಿಲ್ಲ ಎಂಬ ಆಕ್ಷೇಪ ಉಳಿದ ಪ್ರಯಾಣಿಕರದ್ದಾಗಿತ್ತು. ವಿಳಂಬವಾಗಿ ಬಸ್ ಬಂದ ಹಿನ್ನೆಲೆಯಲ್ಲಿ ಚಾಲಕನ ಜೊತೆ ಪ್ರಯಾಣಿಕರು ವಾಗ್ವಾದಕ್ಕಿಳಿದಿದ್ದಾರೆ. ಈ ಸಮಯದಲ್ಲಿ ಎರಡು ಮೂರು ಪ್ರಯಾಣಿಕರು ಸೇರಿ ಚಾಲಕನನ್ನು ತಳ್ಳಿದ್ದಾರೆ. ಚಾಲಕನ ಮೇಲೆ ಹಲ್ಲೆಗೆ ಯತ್ನವು ನಡೆಸಿದ್ದರು.

ಮೂರು ಬಸ್ ಬೇಕಾಗುವಷ್ಟು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿದ್ದ ಕಾರಣ, ಪ್ರಯಾಣಿಕರು ಮತ್ತು ಚಾಲಕನ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.