ಕಾರವಾರ : ಕಾರವಾರ – ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕನಾ..? ಇಲ್ಲಾ ಕಾಂಗ್ರೆಸ್ನಲ್ಲಿ ಸೈಲ್, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಗೆ ಸರಿದೂಗಬಲ್ಲ ನಾಯಕನಾ..? ಹೀಗೊಂದು ಮುಜುಗರಕ್ಕೀಡಾಗುವ ಪ್ರಶ್ನೆಗೆ ರಾಜ್ಯದ ಕಾಂಗ್ರೆಸ್ ನಾಯಕರೇ ಉತ್ತರಿಸಬೇಕಿದೆ..? ಕಾರವಾರದಲ್ಲಿ ವಂದೇ ಭಾರತ್ ರೈಲನ್ನು ಸ್ವಾಗತಿಸುವ ವೇಳೆ, ಸತೀಶ್ ಸೈಲ್ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅತಿರೇಕದ ವರ್ತನೆಯ ಹುಚ್ಚಾಟ, ಹೀಗೊಂದು ಹಾಸ್ಯಾಸ್ಪದ ಪ್ರಶ್ನೆಯನ್ನು ಹುಟ್ಟು ಹಾಕಿದೆ…
ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಈ ರೈಲು ಕಾರವಾರ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಶ್ರೀಮತಿ ರೂಪಾಲಿ ಎಸ್. ನಾಯ್ಕ, ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡ್ರೆ, ಶಾಸಕ ಸತೀಶ್ ಸೈಲ್, ಹಸಿರು ನಿಶಾನೆ ತೋರಿಸಿದ್ರು. ಆದ್ರೆ ಈ ವೇಳೆ ಶಾಸಕ ಸತೀಶ್ ಸೈಲ್ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ದೂಂಡಾವರ್ತನೆ ಮಾತ್ರ ಜಿಲ್ಲೆಗೆ, ಕಾಂಗ್ರೆಸ್ ಪಕ್ಷಕ್ಕೆ ಕಳಂಕ ಅಂಟಿಸುವಂತಿತ್ತು…
ಅಷ್ಟಕ್ಕೂ ಆಗಿದ್ದೇನಂದ್ರೆ, ವಂದೇ ಭಾರತ್ ರೈಲು ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಆಗಮಿಸಿದ್ರು. ಸಹಜವಾಗಿ ಇದು ಕೇಂದ್ರ ಸರ್ಕಾರದ ಮತ್ತು ಬಿಜೆಪಿಯ ಮಹತ್ವಾಕಾಂಕ್ಷೆ ಯೋಜನೆ ಆಗಿರೋದ್ರಿಂದ, ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಿಂದಲೇ ಆಗಮಿಸಿದ್ರು. ಈ ವೇಳೆ ಇತ್ತಿಚಿಗಷ್ಟೇ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕಗೊಂಡಿರುವ ಶ್ರೀಮತಿ ರೂಪಾಲಿ ನಾಯ್ಕ ಅವರನ್ನು ನೋಡಿದ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಇದ್ರಲ್ಲೇನು ವಿಶೇಷವಿರಲಿಲ್ಲ ಬಿಡಿ… ಯಾಕಂದ್ರೆ ಬಿಜೆಪಿಯ ಯೋಜನೆ.. ಬಿಜೆಪಿಯ ಜನಮೆಚ್ಚಿದ ನಾಯಕಿ.. ಹೀಗಾಗಿ ರೂಪಾಲಿ ನಾಯ್ಕ ಪರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿರೋದ್ರಲ್ಲಿ ತಪ್ಪೇನು ಇರಲಿಲ್ಲ. ಈ ಸ್ಥಾನದಲ್ಲಿ ಯಾರೇ ನಾಯಕನಿದ್ರೂ ಕಾರ್ಯಕರ್ತರು ಘೋಷಣೆಗಳನ್ನು ಕೂಗೇ ಕೂಗ್ತಿದ್ರು…
ಆದ್ರೆ ಸಭ್ಯತೆ ಪ್ರದರ್ಶಿಸಿದ ರೂಪಾಲಿಯವರು, ವೇದಿಕೆಯಿಂದ ಎದ್ದು ಬಂದು ಮೈಕ್ ಹಿಡಿದು ಮನವಿ ಮಾಡಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ನನ್ನ ಹೆಸರಿನಲ್ಲಿ ಯಾರೂ ಘೋಷಣೆಗಳನ್ನು ಕೂಗಬೇಡಿ. ಪ್ರಧಾನಿ ಮೋದಿಯವರಿಗೆ ಹಾಗೂ ವಂದೇ ಭಾರತ್ ರೈಲಿಗೆ ಘೋಷಣೆಗಳನ್ನು ಕೂಗಿ ಅಂತ ಮನವಿ ಮಾಡಿ ಸಭಾ ಮರ್ಯಾದೆಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಅಷ್ಟೊತ್ತಿಗಾಗಲೇ ಬಿಜೆಪಿ ಕಾರ್ಯಕರ್ತರು ರೂಪಾಲಿಯವರ ಮನವಿಗೆ ಸುಮ್ಮನಾಗಿದ್ರು.
ರೂಪಾಲಿಯವರ ಮನವಿ ಧಿಕ್ಕರಿಸಿ ಕಿರುಚಾಡಿದ ಸೈಲ್ ಬೆಂಬಲಿಗರು
ಆದ್ರೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸತೀಶ್ ಸೈಲ್ ಬೆಂಬಲಿಗರು ಸತೀಶ್ ಸೈಲ್, ಸತೀಶ್ ಸೈಲ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು, ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇಲ್ಲೇ ಸೈಲ್ ಬೆಂಬಲಿಗರು ಎಡವಟ್ಟು ಮಾಡಿಕೊಂಡಿದ್ದು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆ ಎಲ್ಲಿ.. ಶಾಸಕ ಸತೀಶ್ ಸೈಲ್ ಎಲ್ಲಿ ಅನ್ನೋ ಪರಿಜ್ಞಾನವೂ ಇಲ್ಲದ ಕಾಂಗ್ರೆಸ್ ಕಾರ್ಯಕರ್ತರು, ಮೋದಿ ಘೋಷಣೆಗೆ ಪ್ರತಿಯಾಗಿ ಸೈಲ್ ಹೆಸರನ್ನು ಕೂಗಿ ಕಾರ್ಯಕ್ರಮದ ಮೂಲ ಗೌರವಕ್ಕೆ ಧಕ್ಕೆ ತಂದಿದ್ದು ವಿಷಾದನೀಯ.
ಸೌಜನ್ಯಕ್ಕೂ ಸೈಲ್ ಸುಮ್ಮನಿರಿ ಅಂತ ಕಾರ್ಯಕರ್ತರಿಗೆ ಹೇಳಲೇ ಇಲ್ಲ..!
ಒಂದೆಡೆ ರೂಪಾಲಿ ನಾಯ್ಕ ಅವರು ಘೋಷಣೆ ಕೂಗದಂತೆ ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ರೆ, ಮತ್ತೊಂದೆಡೆ ಶಾಸಕ ಸತೀಶ್ ಸೈಲ್ ಮಾತ್ರ ವೇದಿಕೆಯಲ್ಲಿ ಸುಮ್ಮನೆ ಕುಳಿತಿದ್ರು. ಅತಿರೇಕದಿಂದ ಘೋಷಣೆಗಳನ್ನು ಕೂಗುತ್ತಿದ್ದ ತಮ್ಮ ಕಾರ್ಯಕರ್ತರಿಗೆ ಸುಮ್ಮನಿರಿ ಅಂತ ಸೌಜನ್ಯಕ್ಕಾದ್ರೂ ಹೇಳಬಹುದಿತ್ತು. ಯಾಕಂದ್ರೆ ರೂಪಾಲಿಯವರಿಗೆ ಅವಮಾನವಾಗಲಿ ಅಂತಾನೇ ಸೈಲ್, ಕಾರ್ಯಕರ್ತರನ್ನು ಹತೋಟಿಗೆ ತರದೇ ಸುಮ್ಮನಿದ್ರು ಅನ್ನೋ ಮಾತುಗಳು ಕೇಳಿ ಬರುತ್ತಿದೆ..
ಕೇಸರಿ ಶಾಲು ಹಾಕಿದ ಮಕ್ಕಳನ್ನು ನೋಡಿ ಸೈಲ್ ಕೆಂಡಾಮಂಡಲ!
ಮತ್ತೊಂದು ಆಘಾತಕಾರಿ ವಿಚಾರ ಏನು ಅಂದ್ರೆ, ಕಾರ್ಯಕ್ರಮ ಆಯೋಜಿಸಿದ್ದವರು ಸೈಲ್ ಹಾದಿ ಕಾದು-ಕಾದು ಸುಸ್ತಾಗಿದ್ರು. ಯಾಕಂದ್ರೆ ಕಾರ್ಯಕ್ರಮ ಶುರುವಾಗೋಕೆ ಐದು ನಿಮಿಷಗಳಿರುವಾಗ ಆಗಮಿಸಿದ ಶಾಸಕರು, ಕೇಸರಿ ಶಾಲು ಹಾಕಿದ್ದ ಮಕ್ಕಳನ್ನು ನೋಡಿ ಅವಾಜ್ ಹಾಕಿದ್ದಾರಂತೆ. ಇದೇ ವಿಚಾರವಾಗಿ ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಇನ್ನೊಂದು ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ರೂಪಾಲಿಯವರು ಶಾಸಕರ ಪ್ರೋಟೋಕಾಲ್‌ಗೆ ನಾನು ಅಡ್ಡಿಯಾಗಲ್ಲ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದಿದ್ದಾರೆ. ಆದ್ರೆ ಅಧಿಕಾರಿಗಳು ನೀವು ಕಾರ್ಯಕ್ರಮಕ್ಕಿರಲೇಬೇಕು ಎಂದಿದ್ದಾರೆ. ಹೀಗಾಗಿ ರೂಪಾಲಿಯವರು ಅಧಿಕಾರಿಗಳ ಒತ್ತಡಕ್ಕೆ ಮಣಿದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸೈಲ್ ವೇದಿಕೆಗೆ ಬಂದಾಗ ಗೌರವ ಸಲ್ಲಿಸಿ ಸಭಾ ಮರ್ಯಾದೆಗೆ ಧಕ್ಕೆಯಾಗದಂತೆ ನಡೆದುಕೊಂಡು ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ…
ಅದ್ವಾನಕ್ಕೆ ಅವಕಾಶ ನೀಡಿ ಬಿಜೆಪಿ ಮೇಲೆ ಗೂಬೆ ಕೂರಿಸಿದ ಸೈಲ್..!
ತಮ್ಮ ನಾಯಕನೇ ಸುಮ್ಮನಿರಬೇಕಾದ್ರೆ ಕಾರ್ಯಕರ್ತರು ಏನ್ ಮಾಡ್ತಾರೆ ಹೇಳಿ..? ಮೋದಿ ಘೋಷಣೆಗೆ ಸೈಲ್ ಹೆಸರನ್ನು ಕೂಗಿ ಮುಜುಗರಕ್ಕೀಡಾಗಿದ್ದಾರೆ. ಮೋದಿ ಎಲ್ಲಿ.. ಕಾಂಗ್ರೆಸ್ ಎಲ್ಲಿ.. ಎಲ್ಲಕ್ಕಿಂತ ಹೆಚ್ಚಾಗಿ ಸತೀಶ್ ಸೈಲ್ ಎಲ್ಲಿ ಎನ್ನುವ ಕನಿಷ್ಟ ಪರಿಜ್ಞಾನವೂ ಇಲ್ಲದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೈ ಕಾರ್ಯಕರ್ತರು ವಾಂತಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಅದ್ವಾನಗಳಿಗೆ ಎಡೆಮಾಡಿಕೊಟ್ಟ ಶಾಸಕ ಸೈಲ್, ಕೊನೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಗೂಬೆ ಕೂರಿಸಿದ್ದಾರೆ. ಪಕ್ಷದ ಶಾಲು ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ…
ಇನ್ನು ವಂದೇ ಭಾರತ್ ರೈಲಿನಲ್ಲಿ ತಮ್ಮ ಬೆಂಬಲಿಗರು ಆಕಾಶ ಭೂಮಿ ಒಂದಾಗುವಂತೆ ಸತೀಶ್ ಸೈಲ್ ಅವರಿಗೆ ಜಯವಾಗಲಿ ಅಂದಾಗಲೂ ನಗುತ್ತಿದ್ದ ಸೈಲ್, ಬಿಜೆಪಿ ಕಾರ್ಯಕರ್ತರು ರೂಪಾಲಿಯವರಿಗೆ ಜೈ ಹಾಕರ ಹಾಕಿದ್ದನ್ನು ತಪ್ಪು ಎನ್ನುತ್ತಿದ್ದಾರೆ. ಇದ್ಯಾವ ಸೀಮೆ ನ್ಯಾಯ ಸ್ವಾಮಿ ಅಂತ ವಿಡಿಯೋ ನೋಡಿದವರೆಲ್ಲ ಕಮೆಂಟ್ ಮಾಡ್ತಿದ್ದಾರೆ…
ಸೈಲ್ ಈ ಹೇಳಿಕೆಗೆ ಕ್ಷೇತ್ರದ ಮತದಾರ ನಗುತ್ತಿದ್ದಾರೆ. ಹಾಗಾದ್ರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ಕಾರ್ಯಕರ್ತರು ಶಾಲು ಹಾಕಿಕೊಂಡು ಬಂದಿದ್ರಾ? ಇಲ್ಲಾ ತಾನೇ.. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ.. ಪಕ್ಷದ ನಿಷ್ಟಾವಂತ ನಾಯಕಿಯಾಗಿ ರೂಪಾಲಿಯವರು ಭಾಗವಹಿಸಿದ್ರು. ಅದ್ರಲ್ಲಿ ತಪ್ಪೇನಿದೆ.. ಒಂದು ವೇಳೆ ಇದೇ ಯೋಜನೆಯನ್ನು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಜಾರಿಗೆ ತಂದಿದ್ರೆ, ನೀವು ಕಾರ್ಯಕ್ರಮಕ್ಕೆ ಬರದೇ ಇರುತ್ತಿದ್ರಾ? ಆದ್ರೆ “ಹರಕು ಬಾಯಿ ಗುತ್ತಿಗೆ ಪಡೆದ ನಾಚಿಕೆಗೆಟ್ಟ ಕೆಲ ಮಾಧ್ಯಮಗಳು ಸೈಲ್ ಪರ ವಕಾಲತ್ತು ವಹಿಸಿ ಸತ್ಯ ಮರೆ ಮಾಚಿರುವುದು ನಮ್ಮ ಇಂದಿನ ರಾಜಕಾರಣದ ದುರಂತ…