Team India: 2024 ರಲ್ಲಿ ಭಾರತ ಯಾರ ವಿರುದ್ಧ ಸರಣಿಯನ್ನು ಆಡಲಿದೆ?: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಭಾರತ ಕ್ರಿಕೆಟ್ ತಂಡಕ್ಕೆ 2023ನೇ ವರ್ಷ ಅದ್ಭುತ ಎಂದು ಹೇಳಲು ಸಾಧ್ಯವಿಲ್ಲ. ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಎರಡು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಟೀಮ್ ಇಂಡಿಯಾ (Team India) ಕಳೆದುಕೊಂಡಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2023 ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ 2023ನೇ ವರ್ಷವನ್ನು ಕೊನೆಗೊಳಿಸುತ್ತಿದೆ. ಹಾಗಾದರೆ 2024 ರಲ್ಲಿ ಭಾರತ ಕ್ರಿಕೆಟ್ ತಂಡ ಯಾವ ತಂಡದ ವಿರುದ್ಧ ಆಡಲಿದೆ?, ಹೇಗಿದೆ ವೇಳಾಪಟ್ಟಿ? ನೋಡೋಣ.

ಜನವರಿಯಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಹಾಗೂ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್ ಜೊತೆಗೆ ಭಾರತ ಕ್ರಿಕೆಟ್ ತಂಡ ಅಫ್ಘಾನಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ವಿವಿಧ ಸ್ವರೂಪಗಳಲ್ಲಿ ಸರಣಿಗಳನ್ನು ಆಡಲಿದೆ. ಇದರ ನಡುವೆ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್ 2024ರಲ್ಲಿ ಟೀಮ್ ಇಂಡಿಯಾ ಬ್ಯುಸಿಯಾಗಲಿದೆ. ಟಿ20 ವಿಶ್ವಕಪ್ 2024 ಕ್ಕಾಗಿ ಭಾರತ ವೆಸ್ಟ್ ಇಂಡೀಸ್ ಮತ್ತು USA ಗೆ ತೆರಳಲಿದೆ.

ಟೀಮ್ ಇಂಡಿಯಾ 2024ರ ಸಂಪೂರ್ಣ ವೇಳಾಪಟ್ಟಿ:

  • ಜನವರಿ 3-7 ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್
  • ಜನವರಿ 11 ರಿಂದ 17 – ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ T20 ಸರಣಿ
  • ಜನವರಿ 25 ರಿಂದ ಮಾರ್ಚ್ 11 – ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ T20 ಸರಣಿ
  • ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ – ಐಪಿಎಲ್ 2024
  • ಜೂನ್ 4 ರಿಂದ ಜೂನ್ 30 – ಐಸಿಸಿ ಟಿ20 ವಿಶ್ವಕಪ್ 2024
  • ಜುಲೈ 2024- ಶ್ರೀಲಂಕಾದಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿ (ದಿನಾಂಕ ಪ್ರಕಟವಾಗಿಲ್ಲ)
  • ಸೆಪ್ಟೆಂಬರ್ 2024- ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು T20ಗಳು ಮತ್ತು ಎರಡು ಟೆಸ್ಟ್ ಸರಣಿಗಳು (ದಿನಾಂಕ ಪ್ರಕಟವಾಗಿಲ್ಲ)
  • ಅಕ್ಟೋಬರ್ 2024 – ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ
  • ನವೆಂಬರ್-ಡಿಸೆಂಬರ್ 2024- ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ