ಹಳಿಯಾಳ : ರಾಜ್ಯದ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾಗಿರುವ ಆರ್.ವಿ.ದೇಶಪಾಂಡೆಯವರನ್ನು ಕರ್ನಾಟಕ ಸರಕಾರದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೈತಾನ ಬಾರ್ಬೋಜಾ ಅವರು ಹರ್ಷ ವ್ಯಕ್ತಪಡಿಸಿ, ಶಾಸಕರ ಗೃಹ ಕಚೇರಿಯಲ್ಲಿ ದೇಶಪಾಂಡೆಯವರನ್ನು ಅಭಿನಂದಿಸಿದ್ದಾರೆ.