ದಾಂಡೇಲಿ: ಪೌರಾಯುಕ್ತರ ಆದೇಶದ ಮೇರೆಗೆ ಕನ್ನಡ ಭಾಷೆಯ ನಾಮಫಲಕ ಅಳವಡಿಸುವ ಕುರಿತು ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ ಹಾಗೂ ಅವರ ಸಿಬ್ಬಂದಿಗಳು ನಗರದ ವಿವಿಧ ಭಾಗಗಳಲ್ಲಿ ವಾಣಿಜ್ಯ ಮಳಿಗೆ ಹಾಗೂ ವಸತಿ ಗೃಹ ಮತ್ತು ಹೋಟೆಲ್ ಮಾಲಿಕರಿಗೆ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಶೇ 60% ಕನ್ನಡ ಭಾಷೆಯಲ್ಲಿ ನಾಮಫಲಕವನ್ನು ಅಳವಡಿಸಲು ಕಟ್ಟಡ ಮಾಲಿಕರಿಗೆ ತಿಳಿಸಿದ್ದಾರೆ.
ಡಿಸಂಬರ್ 31ರೊಳಗಾಗಿ ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸದಿದ್ದಲ್ಲಿ ಅನ್ಯ ಭಾಷೆಯ ನಾಮಫಲಕವನ್ನು ನಗರ ಸಭೆಯ ವತಿಯಿಂದ ತೆರವುಗೊಳಿಸಲಾಗುವುದೆಂದು ಪರಶುರಾಮ ಶಿಂಧೆ ಅವರು ಮಾದ್ಯಮದ ಮೂಲಕ ತಿಳಿಸಿದ್ದಾರೆ.