ಈ ಬಾರಿಯ ಐಪಿಎಲ್ ಹರಾಜಿನ ಮೂಲಕ RCB ತಂಡಕ್ಕೆ ಎಂಟ್ರಿ ಕೊಟ್ಟ ಆಟಗಾರರಲ್ಲಿ ಸ್ವಪ್ನಿಲ್ ಸಿಂಗ್ ಕೂಡ ಒಬ್ಬರು. ಉತ್ತರ ಪ್ರದೇಶ ಮೂಲದ 32 ವರ್ಷದ ಸ್ವಪ್ನಿಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 20 ಲಕ್ಷ ರೂ.ಗೆ ಖರೀದಿಸಿದೆ.
ವಿಶೇಷ ಎಂದರೆ ಸ್ವಪ್ನಿಲ್ ಸಿಂಗ್ ಐಪಿಎಲ್ಗೆ ಎಂಟ್ರಿ ಕೊಟ್ಟು 16 ವರ್ಷಗಳೇ ಕಳೆದಿವೆ. ಆದರೆ ಆಡಿರುವುದು ಕೇವಲ 7 ಪಂದ್ಯಗಳನ್ನು ಮಾತ್ರ. ಅದು ಕೂಡ ಮೂರು ತಂಡಗಳನ್ನು ಪ್ರತಿನಿಧಿಸಿ ಎಂಬುದು ಇಲ್ಲಿ ಉಲ್ಲೇಖಾ
ಅಂದರೆ 2008 ರ ಚೊಚ್ಚಲ ಐಪಿಎಲ್ನಲ್ಲಿ ಸ್ವಪ್ನಿಲ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 4 ಲಕ್ಷ ರೂ. ನೀಡಿ ಖರೀದಿಸಿತ್ತು. ಇದಾದ ಬಳಿಕ 2016 ರಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 10 ಲಕ್ಷ ರೂ. ಗೆ ಸ್ವಪ್ನಿಲ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು
ಇನ್ನು 2023 ರ ಹರಾಜಿನಲ್ಲಿ ಸ್ವಪ್ನಿಲ್ ಸಿಂಗ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದರು. ಹೀಗೆ ಮೂರು ತಂಡಗಳಲ್ಲಿ ಕಾಣಿಸಿಕೊಂಡಿದ್ದ ಬೌಲಿಂಗ್ ಆಲ್ರೌಂಡರ್ ಆಡಿರುವ ಒಟ್ಟು ಪಂದ್ಯಗಳ ಸಂಖ್ಯೆ 7.
ಈ ಏಳು ಪಂದ್ಯಗಳಿಂದ ಸ್ವಪ್ನಿಲ್ ಸಿಂಗ್ ಕಲೆಹಾಕಿರುವುದು ಕೇವಲ 14 ರನ್ ಮಾತ್ರ. ಹಾಗೆಯೇ 1 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ 75 ಪಂದ್ಯಗಳಿಂದ ಪಡೆದಿರುವುದು 63 ವಿಕೆಟ್ಗಳು ಮಾತ್ರ. ಇದೇ ವೇಳೆ ಬ್ಯಾಟಿಂಗ್ನಲ್ಲಿ ಕಲೆಹಾಕಿದ್ದು 849 ರನ್ಗಳು.
ಇದಾಗ್ಯೂ ಈ ಬಾರಿ ಆರ್ಸಿಬಿ ಸ್ಥಳೀಯ ಪ್ರತಿಭೆಗಳಿಗೆ ಮಣೆಹಾಕದೇ 32 ವರ್ಷದ ಆಟಗಾರನಿಗೆ ಅವಕಾಶ ನೀಡಿರುವುದು ಅಚ್ಚರಿಯೇ ಸರಿ. ಈ ಅಚ್ಚರಿಯ ಆಯ್ಕೆ RCB ತಂಡದ ಪಾಲಿಗೆ ಹೇಗೆ ವರವಾಗಲಿದೆ ಎಂಬುದನ್ನು ಕಾದುನೋಡಬೇಕಷ್ಟೇ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.