ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸೀಸ್ ತಂಡ ನಾಯಕಿ ಅಲಿಸ್ಸಾ ಹೀಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ.
ಕಳೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಈ ಪಂದ್ಯಕ್ಕೂ ಅದೇ ಪ್ಲೇಯಿಂಗ್ ಇಲೆವೆನ್ ಅನ್ನೇ ಮುಂದುವರೆಸಿದೆ. ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಕಣಕ್ಕಿಳಿಯಲಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗಾಸ್ ಬ್ಯಾಟ್ ಬೀಸಿದರೆ, 4ನೇ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ 5 ಮತ್ತು 6ನೇ ಬ್ಯಾಟರ್ಗಳಾಗಿ ಯಾಸ್ತಿಕಾ ಭಾಟಿಯಾ ಹಾಗೂ ರಿಚಾ ಘೋಷ್ ಆಡಲಿದ್ದಾರೆ.
ತಂಡದಲ್ಲಿ ಆಲ್ರೌಂಡರ್ಗಳಾಗಿ ದೀಪ್ತಿ ಶರ್ಮಾ ಹಾಗೂ ಸ್ನೇಹ ರಾಣ ಕಾಣಿಸಿಕೊಂಡಿದ್ದು, ವೇಗಿಗಳಾಗಿ ಪೂಜಾ ವಸ್ತ್ರಾಕರ್ ಹಾಗೂ ರೇಣುಕಾ ಸಿಂಗ್ ಬೌಲಿಂಗ್ ಮಾಡಲಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ:
ಮೊದಲ 10 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಭಾರತೀಯ ವನಿತೆಯರು ಯಶಸ್ವಿಯಾಗಿದ್ದಾರೆ. ಟಾಸ್ ಗೆದ್ದು ಮೊದಲ ಇನಿಂಗ್ಸ್ ಆರಂಭಿಸಿದ ಫೋಬೆ ಲಿಚ್‌ಫೀಲ್ಡ್ (0) ಮೊದಲ ಓವರ್ನಲ್ಲಿ ಜೆಮಿಮಾ ಮಾಡಿದ ಅತ್ಯುತ್ತಮ ಫೀಲ್ಡಿಂಗ್ನಿಂದಾಗಿ ರನೌಟ್ ಆದರು. ಇದರ ಬೆನ್ನಲ್ಲೇ ಎಲ್ಲಿಸ್ ಪೆರ್ರಿ (4) ಯನ್ನು ಪೂಜಾ ವಸ್ತ್ರಾಕರ್ ಕ್ಲೀನ್ ಬೌಲ್ಡ್ ಮಾಡಿದರು. ಅದರಂತೆ ಮೊದಲ 10 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 2 ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಬೆತ್ ಮೂನಿ ಹಾಗೂ ತಹ್ಲಿಯಾ ಮೆಕ್‌ಗ್ರಾತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ ಪ್ಲೇಯಿಂಗ್ ಇಲೆವೆನ್: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ರಿಚಾ ಘೋಷ್ , ದೀಪ್ತಿ ಶರ್ಮಾ , ಸ್ನೇಹ ರಾಣಾ , ಪೂಜಾ ವಸ್ತ್ರಾಕರ್ , ರೇಣುಕಾ ಠಾಕೂರ್ ಸಿಂಗ್ , ರಾಜೇಶ್ವರಿ ಗಾಯಕ್ವಾಡ್.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಬೆತ್ ಮೂನಿ , ಫೋಬೆ ಲಿಚ್‌ಫೀಲ್ಡ್ , ಎಲ್ಲಿಸ್ ಪೆರ್ರಿ , ತಹ್ಲಿಯಾ ಮೆಕ್‌ಗ್ರಾತ್ , ಅಲಿಸ್ಸಾ ಹೀಲಿ (ನಾಯಕಿ) , ಅನ್ನಾಬೆಲ್ ಸದರ್ಲ್ಯಾಂಡ್ , ಆಶ್ಲೀ ಗಾರ್ಡ್ನರ್ , ಜೆಸ್ ಜೊನಾಸೆನ್ , ಅಲಾನಾ ಕಿಂಗ್ , ಕಿಮ್ ಗಾರ್ತ್ , ಲಾರೆನ್ ಚೀಟಲ್.