ಚಿಕ್ಕಬಳ್ಳಾಪುರ: ಕಾರು ಡಿಕ್ಕಿ, ಬೈಕ್​ನಲ್ಲಿ ತೆರಳುತ್ತಿದ್ದ ದಂಪತಿ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ, ಡಿ.13: ಕಾರು ಡಿಕ್ಕಿ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯಿಂದ್ರಹಳ್ಳಿ ಬಳಿ ನಡೆದಿದೆ. ಸುಬ್ರಮಣಿ(55), ಗಾಯತ್ರಮ್ಮ(50) ಮೃತ ರ್ದುದೈವಿಗಳು. ಮೃತ ದಂಪತಿ ಕೋಲಾರ ತಾಲೂಕಿನ ಕ್ಯಾಲನೂರು ನಿವಾಸಿಗಳಾಗಿದ್ದು, ನಾಯಿಂದ್ರಹಳ್ಳಿ ಗ್ರಾಮಕ್ಕೆ ಆಗಮಿಸಿ ವಾಪಸ್ ಊರಿಗೆ ಹೊಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.