ಡಿವೈಡರ್​ಗೆ ಗುದ್ದಿ ಗಾಳಿಯಲ್ಲಿ 3 ಬಾರಿ ಪಲ್ಟಿ ಹೊಡೆದ ಕಾರು: ಚಾಲಕನ ಪ್ರಾಣ ಉಳಿಸಿದ ಸೀಟ್​ ಬೆಲ್ಟ್​

ರಾಮನಗರ, ಡಿಸೆಂಬರ್​​ 11: ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್​ ಬೆಲ್ಟ್ ​​ ಧರಿಸಿ ಎಂದು ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಕೂಡ ಸೀಟ್​ ಬೆಲ್ಟ್​​ ಧರಿಸದೆ ಅನೇಕರು ವಾಹನ ಚಲಾಯಿಸುತ್ತಿದ್ದು, ಇದರಿಂದ ಅಪಘಾತದ ಸಂದರ್ಭದಲ್ಲಿ ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ. ಈ ಪ್ರಕರಣದಲ್ಲಿ ಯುವಕ ಸಂಚಾರಿ ನಿಯಮ ಪಾಲಿಸಿದ್ದರಿಂದ ಪ್ರಾಣ ಉಳಿದಿದೆ. ಹೌದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರು ಡಿವೈಡರ್​ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದಿದೆ. ಕಾರು ಚಾಲಕ ಸೀಟ್​ ಬೆಲ್ಟ್​ ಧರಿಸಿದ್ದರಿಂದ ಪ್ರಾಣ ಉಳಿದಿದೆ. ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದೆ.

ಇದರಿಂದ ಚಿಕ್ಕ ಗಾಯವಿಲ್ಲದೆ ಯವಕ ಬಚಾವ್​ ಆಗಿದ್ದಾನೆ. ಕಾರಿನ ಅವಸ್ಥೆ ನೋಡಿದರೇ ಚಾಲಕ ಬದುಕಿದ್ದೇ ಪವಾಡ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಓರ್ವ ಯುವಕ ಕಾರಿನಲ್ಲಿ ಹೊರಟಿದ್ದನು. ದಾರಿ ಮಧ್ಯೆ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ನಿಯ ಡಿವೈಡರ್​ಗೆ ಗುದ್ದಿದೆ. ಹೆದ್ದಾರಿ ಡಿವೈಡರ್ ಕೂಡ ಪೀಸ್ ಪೀಸ್ ಆಗಿದ್ದು, ಸೂಚನಾ ಫಲಕ ಸರ್ವೀಸ್ ರಸ್ತೆಗೆ ಬಿದ್ದಿದೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.