ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಕುಮಟಾ: ಉ.ಕ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಒಟ್ಟೂ 09 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುತ್ತಾರೆ.

ಪ್ರಥಮ ಪಿಯುಸಿ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಜಿತ ಭಟ್ಟ ಮತ್ತು ಪ್ರಣವ ಭಟ್ಟ ತೃತೀಯ ಸ್ಥಾನ ಪಡೆದರೆ, ದ್ವಿತೀಯ ಪಿಯುಸಿ ವಿಭಾಗದ ರಸಪ್ರಶ್ನೆಯಲ್ಲಿ ಅಭಯ ಭಟ್ಟ ಮತ್ತು ದೀಕ್ಷಾ ಹೆಗಡೆ ಪ್ರಥಮ ಸ್ಥಾನ, ಆಶು ಭಾಷಣದಲ್ಲಿ ಮೇಧಿನಿ ಭಟ್ಟ ಪ್ರಥಮ ಸ್ಥಾನ, ಏಕಪಾತ್ರಾಭಿನಯದಲ್ಲಿ ಎಚ್.ಎಲ್.ಆತೀಶ ದ್ವಿತೀಯ ಸ್ಥಾನ ಪಡೆದು ವಿಜಯಪುರದ ಇಂಡಿಯಲ್ಲಿ ನಡೆಯಲಿರುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಕೆನರಾ ಎಕ್ಸಲೆನ್ಸ್ ಕಾಲೇಜಿಗೆ, ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.