ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಾನಿ

ಯಲ್ಲಾಪುರ: ಮಳೆ ಗಾಳಿಯ ಪರಿಣಾಮ ತಾಲೂಕಿನ ಜಮೆಜಡ್ಡಿ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು, ಕಂಬಗಳಿಗೆ ಹಾನಿಯಾಗಿದೆ.

ಶಿರಸಿ ರಸ್ತೆ ಪಕ್ಕ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದು, ಮೂರು ಕಂಬಗಳು ಮುರಿದಿವೆ. ವಿದ್ಯುತ್ ಲೈನ್ ತುಂಡಾಗಿ ಉಪಳೇಶ್ವರ ಭಾಗಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೇರೆ ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡರು.