ಚಾಮರಾನಗರ: ಅಜ್ಜನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ದುರಂತ ಅಂತ್ಯ

ಚಾಮರಾನಗರ, (ನವೆಂಬರ್ , 27): ತಾತಾನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೋಕು ಪಣ್ಯದಹುಂಡಿ ಬಳಿ ನಡೆದಿದೆ. ನಿತೀಶ್ ಪೂಜಾರಿ ((23) ಮೃತ ವಿದ್ಯಾರ್ಥಿ. ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿತೀಶ್ ಪೂಜಾರಿ, ತಾತನ ಅಂತ್ಯಕ್ರಿಯೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿದೆ. ಪಣ್ಯದಹುಂಡಿ ಬಳಿ ರೋಡ್ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿ ಬಿದ್ದಿರಬಹುದು ಎನ್ನಲಾಗಿದ್ದು, ಈ ಬಗ್ಗೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ