ಮೈಸೂರು, (ನವೆಂಬರ್ 26): ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಸಂಖ್ಯಾಶಾಸ್ತ್ರ ಪ್ರಕಾರ ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ. Prathap simha ಎಂಬ ಹೆಸರನ್ನು ಅವರು Pratap Simmha ಎಂದು ಬದಲಿಸಿಕೊಂಡಿರುವುದಾಗಿ ಅಫಿಡೆವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ.
ಲವು ರಾಜಕಾರಣಿಗಳು ಸಂಖ್ಯಾ ಶಾಸ್ತ್ರ, ನಾಮಬಲ, ಜ್ಯೋತಿಷ್ಯವನ್ನು ನಂಬುತ್ತಾರೆ. ಇದರಿಂದಲೇ ಕೆಲವು ರಾಜಕಾರಣಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ. ಮಾಜಿ ಸಿಎಂ ಯಡಿಯೂರಪ್ಪ ಸಹ ತಮ್ಮ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. Yeddyurappa ಎಂದು ಇದ್ದ ಹೆಸರನ್ನು Yediyurappa ಎಂದು ಬದಲಾಯಿಸಿಕೊಂಡಿದ್ದರು.
ಹಾಗೇ ಎಂಎಲ್‌ಸಿ ಹೆಚ್ ವಿಶ್ವನಾಥ್ ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಎಂದು ಸೇರಿಸಿಕೊಂಡಿದ್ದರು. ಅಲ್ಲದೇ ತಮಿಳುನಾಡು ಮಾಜಿ ಸಿಎಂ ಮುಖ್ಯಮಂತ್ರಿ ಜೆ. ಜಯಲಲಿತಾ ಸೇರಿದಂತೆ ಕೆಲವು ರಾಜಕಾರಣಿಗಳು ಸಂಖ್ಯಾಶಾಸ್ತ್ರ ಮತ್ತು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬದಲಿಸಿಕೊಂಡ ಉದಾಹರಣೆ ಇದೆ.
ಇದೀಗ ಸಂಸದ ಪ್ರತಾಪ್ ಸಿಂಹ ಕೂಡ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಇಂಗ್ಲೀಷ್ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.