ಮಂಗಳೂರು, (ನವೆಂಬರ್, 23): ಲಾಡ್ಜ್ ರೂಮ್ನಲ್ಲಿ ಬೆಡ್ಗೆ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಜೀವ ದಹನವಾಗಿರುವ ಘಟನೆ ಮಂಗಳೂರಿನ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ನಲ್ಲಿ ನಡೆದಿದೆ. ಬೆಂದೂರವೆಲ್ ನಿವಾಸಿ ಯಶ್ರಾಜ್ ಸುವರ್ಣ(43) ಎನ್ನುವರು ಸಜೀವ ದಹನವಾಗಿದ್ದಾರೆ. ನವೆಂಬರ್ 15ರಿಂದ ಹೋಟೆಲ್ನಲ್ಲಿ ವಾಸವಿದ್ದ ಯಶ್ರಾಜ್, ನಿನ್ನೆ(ನವೆಂಬರ್ 22) ರಾತ್ರಿ ಊಟ ಮುಗಿಸಿ ರೂಮ್ಗೆ ಬಂದಿದ್ದ. ಬಳಿಕ ಮಧ್ಯರಾತ್ರಿ 12 ಗಂಟೆಗೆ ರೂಮ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಯಶ್ರಾಜ್ ಸುವರ್ಣ ಸಜೀವ ದಹನವಾಗಿದ್ದಾರೆ. ಆದ್ರೆ, ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ನಿನ್ನೆ ರಾತ್ರಿ ಊಟ ಮುಗಿಸಿ ರೂಮ್ಗೆ ಬಂದಿದ್ದ. ಬಳಿಕ ಮಧ್ಯರಾತ್ರಿ 12 ಗಂಟೆಗೆ ರೂಮ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೂಮ್ನಿಂದ ಹೊಗೆ ಬರುವುದನ್ನು ಕಂಡು ಲಾಡ್ಜ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಯಶ್ರಾಜ್ ಸುವರ್ಣ ಸುಟ್ಟು ಕರಕಲಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಯಶ್ರಾಜ್ ಸುವರ್ಣ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೇ ತಾವೇ ಬೆಂಕಿಹಚ್ಚಿಕೊಂಡಿದ್ದಾರಾ? ಅಥವಾ ಸಿಗರೇಟ್ನಿಂದ ಏನಾದರೂ ಬೆಡ್ಗೆ ಬೆಂಕಿ ತಗುಲಿದ್ಯಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.