ಹಾಯ್​​​ ಮೋದಿ ತಾತ ಎಂದ ಪುಟಾಣಿ, ಪ್ರಧಾನಿ ಮೋದಿ ಪ್ರತಿಕ್ರಿಯೆ ಹೇಗಿತ್ತು ನೋಡಿ? 

ಅಹಮದಬಾದ್​​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಬಂದಿದ್ದರು. ಆ ಕುರಿತ ಫೋಟೋ, ವೀಡಿಯೋ ಕ್ಲಿಪ್​​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಅದೇ ರೀತಿ ಇಲ್ಲೊಂದು ವಿಶ್ವಕಪ್ ಫೈನಲ್ ಪಂದ್ಯಾವಳಿಯ ಸಂದರ್ಭದಲ್ಲಿನ ಮುದ್ದಾದ ವಿಡಿಯೋ ವೈರಲ್ ಆಗುತ್ತಿದೆ. ವಿಶ್ವಕಪ್ ಫೈನಲ್ ಪಂದ್ಯಾವಳಿಯ ವೇಳೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿಯವರನ್ನು ಕಂಡ ಪುಟ್ಟ ಬಾಲಕಿಯೊಬ್ಬಳು ಬಹಳ ಖುಷಿಯಿಂದ ಕೈ ಸನ್ನೆ ಮಾಡುತ್ತಾ ಹಾಯ್ ಎಂದು ಹೇಳಿದ್ದಾಳೆ. ಆ ಪುಟ್ಟ ಮಗುವಿನ ಅಭಿಮಾನಕ್ಕೆ ಪ್ರತಿಕ್ರಿಯೆ ನೀಡಿದ ಮೋದಿಯವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಈ ವೈರಲ್ ವಿಡಿಯೋವನ್ನು  @s_sagarshah ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಸುಂದರವಾದ ವಿಡಿಯೋ ಕ್ಲಿಪ್ನಲ್ಲಿ  ಸ್ಟೇಡಿಯಂನಲ್ಲಿ ಕುಳಿತು  ಪ್ರಧಾನಿ ಮೋದಿ ವಿಶ್ವಕಪ್ ಫೈನಲ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದ ವೇಳೆಯಲ್ಲಿ ಅವರನ್ನು ಕಂಡ ಪುಟ್ಟ  ಬಾಲಕಿಯೊಬ್ಬಳು ಖುಷಿಯಿಂದ ಕೈ ಸನ್ನೆ ಮಾಡುತ್ತಾ  ಮೋದಿಯವರಿಗೆ  ಹಾಯ್ ಎಂದು ಹೇಳುವುದನ್ನು ಕಾಣಬಹುದು.

https://www.instagram.com/reel/Cz1mNY_yBFK/?utm_source=ig_web_copy_link

ಈ ವಿಡಿಯೋದಲ್ಲಿ  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ ನರೇಂದ್ರ ಮೋದಿಯವರನ್ನು ಕಂಡ ಪುಟ್ಟ ಬಾಲಕಿಯೊಬ್ಬಳು ಖುಷಿಯಿಂದ ಕೈಸನ್ನೆ ಮಾಡುತ್ತಲೇ  ಮೋದಿಯವರಿಗೆ  ಹಾಯ್ ಎಂದು ಹೇಳುತ್ತಾಳೆ.  ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಕ್ರಿಕೆಟ್ ಪಂದ್ಯಾವಳಿಯನ್ನು  ವೀಕ್ಷಿಸುತ್ತಿದ್ದ ಪ್ರಧಾನಿ ಮೋದಿಯವರು  ಈ ಪುಟ್ಟ ಬಾಲಕಿಯನ್ನು ನೋಡಿ, ಪ್ರತಿಕ್ರಿಯಿಸಿದ ಆಕೆಗೂ ಹಾಯ್ ಎಂದು ಕೈಸನ್ನೆಯಲ್ಲೇ ಪ್ರತಿಕ್ರಿಯಿಸುತ್ತಾರೆ. ಈ ಸುಂದರವಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಎರಡು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ಮುದ್ದಾದ ವಿಡಿಯೋ 8.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  413K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಅಲ್ಲದೆ  ಪುಟ್ಟ ಹುಡುಗಿಯ ಅಭಿಮಾನಕ್ಕೆ  ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ ನಡೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.