ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನು ನಿಷೇಧಿಸಿದ ಇಸ್ರೇಲ್, ಮುಂಬೈ ದಾಳಿಯೇ ಕಾರಣ

ಇಸ್ರೇಲ್​​, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ವನ್ನು ನಿಷೇಧಿಸಿದೆ. ನವೆಂಬರ್​​​ 26ರಂದು ಭಾರತದ ಮುಂಬೈ ಹೊಟೇಲ್​​​ ಮೇಲೆ ದಾಳಿ ಮಾಡಿದ ಈ ಸಂಘಟನೆಯನ್ನು ನಿಷೇಧಿಸಲು ಇಸ್ರೇಲ್​​​ ಮುಂದಾಗಿದೆ. ಈ ಭಯೋತ್ಪಾದನಾ ದಾಳಿಯ ಕಹಿನೆನಪಿಗಾಗಿ ಈ ಸಂಘಟನೆಯನ್ನು ನಿಷೇಧಿಸಿದೆ. ಲಷ್ಕರ್-ಎ-ತೊಯ್ಬಾವನ್ನು ಇಸ್ರೇಲ್​​ ತನ್ನ ಭಯೋತ್ಪಾದನ ಪಟ್ಟಿಯಲ್ಲಿ ಸೇರಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಇಸ್ರೇಲ್​​​ ರಾಯಭಾರಿ ಕಚೇರಿ ಒಂದು ವರದಿಯನ್ನು ಭಾರತ ಸರ್ಕಾರಕ್ಕೆ ನೀಡಿದೆ. ಲಷ್ಕರ್-ಎ-ತೈಬಾವನ್ನು ಇಸ್ರೇಲಿ ಕಾನೂನುಬಾಹಿರ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಈ ಬಗ್ಗೆ ಭಾರತ ಸರ್ಕಾರವು ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದೆ.