ಸಿದ್ದಾಪುರ ತಾಲೂಕಿನ ಹುಕ್ಕಳಿ ಗ್ರಾಮದಲ್ಲಿ, ಹೊನ್ನಾವರದ ಚಿಕ್ಕನಕೋಡ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದಾದ ದೌರ್ಜನ್ಯವನ್ನು ಅರಣ್ಯ ಅತಿಕ್ರಮಣ ಹಿರಿಯ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ರು..
ಸಿದ್ದಾಪುರ ತಾಲೂಕಿನ ಹುಕ್ಕಳಿ ಗ್ರಾಮದಲ್ಲಿ, ಹೊನ್ನಾವರದ ಚಿಕ್ಕನಕೋಡ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದಾದ ದೌರ್ಜನ್ಯವನ್ನು ಅರಣ್ಯ ಅತಿಕ್ರಮಣ ಹಿರಿಯ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಲ್ಲದೇ, ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯ ಮಾಡಿದ್ರು..
ಅರಣ್ಯ ಹಕ್ಕು ಕಾಯಿದೆ ಜಾರಿಯಿದ್ದಂತಹ ಸಂದರ್ಭದಲ್ಲಿ, ಮಾನವೀಯತೆಯನ್ನ ಮೀರಿ ಮಕ್ಕಳ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ವೆಸಗಿ, ಅಮಾನವಿಯತೆಯಿಂದ ವರ್ತಿಸಿರುವ ಅರಣ್ಯ ಸಿಬ್ಬಂದಿಗಳನ್ನ ಅಮಾನತ್ತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹೋರಾಟಗಾರರು ಒತ್ತಾಯಪಡಿಸಿದ್ರು. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಹೊನ್ನಾವರ ಡಿ ಎಫ್ ಒ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ…
ದಿವಾಕರ್ ನಾಯ್ಕ, ನುಡಿಸಿರಿನ್ಯೂಸ್, ಸಿದ್ದಾಪುರ..