ದಾಂಡೇಲಿ : ನಗರದ ಬಸವೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ದಿನಾಂಕ 5.2.2004 ರಿಂದ ದಿನಾಂಕ 30.11.2018 ರವರೆಗೆ ಸಂಘದ ಆಗಿನ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಸಂಜಯ್ ಅಪ್ಪಾಸಾಹೇಬ್ ಚೌಗಲಾ ಎಂಬಾವರು ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 10,42,155 ರೂಪಾಯಿ ಹಣವನ್ನು ಅವ್ಯವಹಾರ ಹಾಗೂ ದುರುಪಯೋಗ ಮಾಡಿದ್ದಾರೆಂದು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಂಜಯ್ ಅಪ್ಪಾಸಾಹೇಬ ಚೌಗಲಾ ಎಂಬುವರ ಮೇಲೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೀರೇಶ್.ಎಂ.ಯರಗೇರಿ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬಗ್ಗೆ ಗುರುವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.