ಬಿಜೆಪಿಯ ಸೇವಾ ಪಾಕ್ಷಿಕದ ಅಂಗವಾಗಿ ಹಳಿಯಾಳದಲ್ಲಿ ರಕ್ತದಾನ ಶಿಬಿರ : ರಕ್ತದಾನ ಮಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ

ಹಳಿಯಾಳ : ಬಿಜೆಪಿ ಪಕ್ಷದ ಸೇವಾಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಹಳಿಯಾಳ ಪಟ್ಟಣದ ಶ್ರೀ.ಗಣೇಶ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರ ಇವರ ಸಹಯೋಗದೊಂದಿಗೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಇಂದು ಸೋಮವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಮಾಜಿ ಶಾಸಕರಾದ ಸುನೀಲ್ ಹೆಗಡೆಯವರು ಸ್ವತ: ರಕ್ತದಾನ‌ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಬಹುದು. ರಕ್ತದಾನದಿಂದ ಒಂದು ವ್ಯಕ್ತಿಯ ಜೀವ ಉಳಿಯುವುದರಿಂದ ರಕ್ತದಾನ ಮಾಡಲು ಎಲ್ಲರು ಮುಂದೆ ಬರಬೇಕೆಂದು ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋಧಿಯವರು ದೇಶದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಮಾದರಿ ಆಡಳಿತದ ಮೂಲಕ ವಿಶ್ವ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷರಾದ ಗಣಪತಿ ಕರಂಜೇಕರ, ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ಪುರಸಭೆ ಸದಸ್ಯರಾದ ಉದಯ ಹೂಲಿ, ರೂಪಾ ಗಿರಿ, ಸಂಗೀತಾ ಜಾಧವ್, ಪ್ರಮುಖರಾದ ಶಿವಾಜಿ ನರಸಾನಿ, ವಿಲಾಸ ಯಡವಿ, ಉಮೇಶ ದೇಶಪಾಂಡೆ, ವಾಸುದೇವ ಪೂಜಾರಿ, ಯಲ್ಲಪ್ಪ ಹೊನ್ನೋಜಿ, ಆಕಾಶ ಉಪ್ಪಿನ, ಶಿವಾಜಿ ಪಾಟೀಲ್, ಜಯಲಕ್ಷ್ಮೀ ಚವ್ಹಾಣ, ಸಂಗೀತಾ ಜಾವಳೇಕರ, ಸಿದ್ದು ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.