ವಿಶ್ವದ ಅತಿ ದೊಡ್ಡ ‘ಇಂಡಿಯಾ ಡೇ ಪರೇಡ್’ ಭಾನುವಾರ ಮಧ್ಯಾಹ್ನ ಸಮಾರಂಭ ನ್ಯೂಯಾರ್ಕ್‌ನಲ್ಲಿ ನಡೆಯಿತು. ಭಾರತೀಯ- ಅಮೆರಿಕನ್ ಸಮುದಾಯದ ಸದಸ್ಯರು ಭಾಗಿಯಾಗಿದ್ದರು. ಇಂಡಿಯಾ ಡೇ ಪರೇಡ್‌ನಲ್ಲಿ ಸೌತ್ ನಟಿ ಸಮಂತಾ ಶ್ರೀ ಶ್ರೀ ರವಿಶಂಕರ್ ಗುರೂಜಿ, ಜಾಕ್ವೆಲಿನ್ ಕೂಡ ಭಾಗವಹಿಸಿದ್ದರು ನ್ಯೂಯಾರ್ಕ್ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಸಮಂತಾ ಭಾಗಿಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಮೆರವಣಿಗೆಯಲ್ಲಿ ಮಾತನಾಡಿದ ಸಮಂತಾ, ಇಂದು ನಾನು ಇಲ್ಲಿರುವುದು ನಿಜವಾಗಿಯೂ ನನಗೆ ಗೌರವವಿದೆ. ನನ್ನ ಸಂಸ್ಕೃತಿ ಮತ್ತು ಪರಂಪರೆ ಎಷ್ಟು ಶ್ರೀಮಂತವಾಗಿದೆ ಎಂದು ಇಲ್ಲಿ ನಾನು ನೋಡಿರುವುದು ನನ್ನ ಜೀವಿತಾವಧಿಯಲ್ಲಿ ಉಳಿಯುತ್ತದೆ ಎಂದು ಮಾತನಾಡಿದರು.ಸಮಂತಾ ಪಾಲಿಗೆ ನ್ಯೂಯಾರ್ಕ್ ಎಷ್ಟು ಸ್ಪೆಷಲ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ‘ಯೇ ಮಾಯಾ ಚೇಸಾವೆ’ ಸಿನಿಮಾಗಾಗಿ ನ್ಯೂಯಾರ್ಕ್‌ಗೆ ಬಂದಿದ್ದರ ಬಗ್ಗೆ ನಟಿ ಮೆಲುಕು ಹಾಕಿದ್ದಾರೆ. ಚಿತ್ರದ ಮೊದಲ ಶಾಟ್ ಕೂಡ ಇಲ್ಲಿಯೇ ಚಿತ್ರೀಕರಿಸಿರೋದಾಗಿ ಹಂಚಿಕೊಂಡಿದ್ದಾರೆ. 14 ವರ್ಷಗಳ ನಂತರ ಮತ್ತೆ ನ್ಯೂಯಾರ್ಕ್‌ಗೆ ಬಂದಿರೋದಾಗಿ ಸಮಂತಾ ಹೇಳಿದ್ದಾರೆ.ಕಲರ್‌ಫುಲ್ ಡ್ರೆಸ್ ಧರಿಸಿ ನ್ಯೂಯಾರ್ಕ್‌ನಲ್ಲಿ ಕಂಗೊಳಿಸಿದ್ದಾರೆ. ಈ ಕುರಿತ ಚೆಂದದ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಸಮಂತಾ ಇಷ್ಟು ಪಾಸಿಟಿವ್ ಆಗಿ ಮುಂದುವರೆಯೋದನ್ನ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.