ಬೆಂಗಳೂರು, ಆ.14: ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ ಕಂಡಿದ್ದ ಟೊಮೆಟೊ ದರ ಸದ್ಯ ಇಳಿಕೆ ಕಂಡಿದೆ. ಮಳೆ ಕಡಿಮೆಯಾದ ಹಿನ್ನೆಲೆ ಒಂದು ವಾರದಿಂದ ಟೊಮೆಟೊ ದರ ಕುಸಿತ ಕಾಣುತ್ತಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಆದ್ರೆ ಇದೀಗ ಟೊಮೆಟೊ ಬಳಿಕ ಬೆಳ್ಳುಳ್ಳಿ ಹಾಗೂ ಈರುಳ್ಳಿ ಜನರಲ್ಲಿ ಕಣ್ಣೀರು ತರಿಸಲು ಆರಂಭಿಸಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡು ಬಂದಿದೆ.
ಭಾರೀ ಏರಿಕೆ ಕಂಡು ರೈತರಿಗೆ ಭರಪೂರ ಲಾಭ ತಂದು ಕೊಟ್ಟ ಕೆಂಪು ಸುಂದರಿ ಟೊಮೆಟೊ ಬೆಲೆ ಸದ್ಯ ಇಳಿಕೆ ಕಾಣುತ್ತಿದೆ. ವಾರದಿಂದ ವಾರಕ್ಕೆ ಟೊಮೆಟೊ ದರ ಕುಸಿಯುತ್ತಿದೆ. ಕಳೆದ ವಾರ ಒಂದು ಕೆಜೆ ಟೊಮೆಟೊಗೆ 80 ರಿಂದ 90 ರೂ ಇತ್ತು. ಇಂದು 50 ರಿಂದ 60 ರೂಪಾಯಿ ಆಗಿದೆ. ಆದ್ರೆ ಟೊಮೆಟೊ ಬೆಲೆ ಇಳಿಕೆಯ ನಡುವೆ ಸೈಲೆಂಟ್ ಆಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರ ಕೆಜಿಗೆ 25 ರೂ. ಇದ್ದ ಈರುಳ್ಳಿ ಬೆಲೆ, ಈ ವಾರ 30 -40 ರೂ.ಗೆ ತಲುಪಿದೆ. ಸೂಪರ್ ಮಾರ್ಕೆಟ್ಗಳಲ್ಲಿ ಕೆಜಿಗೆ 45 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡು ಬಂದಿದೆ.