ಮಹಾರಾಷ್ಟ್ರ; ಕಾರು ಚಾಲಕನ ಬೇಜವಾವ್ದಾರಿತನ, 2 ವರ್ಷದ ಹೆಣ್ಣುಹುಲಿ ಸಾವು

ಮಹಾರಾಷ್ಟ್ರ ಮಹಾರಾಷ್ಟ್ರದ ಗೊಂಡಿಯಾ ಅರಣ್ಯ ಪ್ರದೇಶದಲ್ಲಿ 2 ವರ್ಷದ ಹೆಣ್ಣು ಹುಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದೆ. ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಹುಲಿ ಸಾವು ಬದುಕಿನ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಯನ್ನು ನಾಗ್ಝೀರಾ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿದ T-14 ಎಂಬ ಹುಲಿಯ ಎರಡು ವರ್ಷದ ಮರಿ ಎಂದು ಗುರುತಿಸಲಾಗಿದೆ. ರಾತ್ರಿ 10:30ರ ಸುಮಾರಿಗೆ ಮುರ್ಡೋಲಿ ಅರಣ್ಯ ಪ್ರದೇಶದಲ್ಲಿ ಈ ಹುಲಿಯು ಗೊಂಡಿಯಾ-ಕೊಹಮಾರಾ ಹೆದ್ದಾರಿ ದಾಟುತ್ತಿದ್ದಾಗ ವೇಗವಾಗಿ ಬಂದ ಕ್ರೆಟಾ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಗೊಂಡಿಯಾದ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ ಪಂಚಭಾಯ್​ ನೇತೃತ್ವದ ತಂಡವು ಬೆಳಗ್ಗೆ 7.30ಕ್ಕೆ ನಾಗಪುರಕ್ಕೆ ಕರೆದೊಯ್ಯಿತು. ಇಲ್ಲಿಯ ವನ್ಯಜೀವಿ ರಕ್ಷಣಾ ಕೇಂದ್ರದಲ್ಲಿ ಹುಲಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.